ಉಪ್ಪಿನ ಅಧಿಕ ಬಳಕೆ ನಿಯಂತ್ರಿಸಿ, ಹೃದಯ ಆರೋಗ್ಯ ಕಾಪಾಡಿಕೊಳ್ಳಿ..
ಉಪ್ಪಿನ ಸೇವನೆ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮೊದಲ ವರದಿಯನ್ನು ಬಿಡುಗಡೆ ಮಾಡಿದೆ. ಅಧಿಕ ಸೋಡಿಯಂ ಸೇವನೆ ಜಾಗತಿಕವಾಗಿ ಹಲವು ಸಾವು ಹಾಗೂ ರೋಗಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.
ದೇಹಕ್ಕೆ ತೀರಾ ಅಗತ್ಯವಾದ ಪೌಷ್ಟಿಕಾಂಶ ಎನಿಸಿದ ಸೋಡಿಯಂ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ಹೃದ್ರೋಗ, ಪಾಶ್ರ್ವವಾಯು, ಅವಧಿಪೂರ್ವ ಸಾವಿಗೂ ಕಾರಣವಾಬಹುದು. ಅಧಿಕ ಪ್ರಮಾಣದ ಸೋಡಿಯಂ ಅಂಶ ಇರುವ ಉಪ್ಪನ್ನು ಸಾಧ್ಯವಾದಷ್ಟೂ ಕಡಿಮೆ ಸೇವಿಸುವುದು ಉತ್ತಮ.
ಅಧಿಕ ಉಪ್ಪಿನ ಸೇವನೆ ರಕ್ತದ ಒತ್ತಡ ಹೆಚ್ಚಲು ಹಾಗೂ ಹೃದಯಾಘಾತ ಹಾಗೂ ಪಾಶ್ರ್ವವಾಯುವಿನಂಥ ಅಪಾಯ ಸಾಧ್ಯತೆ ಹೆಚ್ಚಲು ಕಾರಣವಾಗುತ್ತದೆ ಎಂದು ನವಿ ಮುಂಬೈ ಮೆಡಿಕವರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಬೃಜೇಶ್ ಕುಮಾರ್ ಕನ್ವರ್ ಹೇಳುತ್ತಾರೆ.
► ನಿಮ್ಮ ಆಹಾರದಲ್ಲಿ ಸಂಸ್ಕರಿತ, ಪೊಟ್ಟಣಗಳಲ್ಲಿ ತುಂಬಿದ ಮತ್ತು ಅನಾರೋಗ್ಯಕರ ಜಂಕ್‍ಫುಡ್ ಬಳಕೆ ಬೇಡ. ಇದು ಅಧಿಕ ಉಪ್ಪಿನ ಅಂಶವನ್ನು ಹೊಂದಿರುತ್ತದೆ. ಇದರ ಬದಲು, ಹಣ್ಣು, ತರಕಾರಿ ಮತ್ತು ಇಡಿಯ ಕಾಳು ಬಳಕೆ ಮಾಡಿ.
► ಅಧಿಕ ಉಪ್ಪಿನ ಅಂಶ ಇರುವ ಸಾಸ್‍ಗಳನ್ನು ನಿಮ್ಮ ಡೈನಿಂಗ್ ಟೇಬಲ್‍ನಿಂದ ಕಿತ್ತುಹಾಕಿ. ಕುಟುಂಬದ ಸದಸ್ಯರು ಹೆಚ್ಚು ಉಪ್ಪು ಬಳಸುವುದನ್ನು ಪ್ರೋತ್ಸಾಹಿಸಬೇಡಿ.
► ಉಪ್ಪಿನ ಬದಲು ಗಿಡಮೂಲಿಕೆ, ಸಾಂಬಾರ, ಬೆಳ್ಳುಳ್ಳಿ ಮತ್ತು ಹುಳಿಯ ಅಂಶವನ್ನು ಹೆಚ್ಚಾಗಿ ಸೇರಿಸಿ ನಿಮ್ಮ ಅಡುಗೆಗೆ ವಿಶೇಷ ರುಚಿಯನ್ನು ನೀಡಿ.
► ಉಪ್ಪು ಅಧಿಕ ಇರುವ ತಿನಸುಗಳಾದ ಆಲೂ ಚಿಪ್ಸ್, ಫ್ರೆಂಚ್ ಫ್ರೈ ಹಾಗೂ ಕ್ರ್ಯಾಕರ್‍ಗಳ ಸೇವನೆ ಬೇಡ.
► ಪೊಟ್ಟಣದ ಆಹಾರಗಳನ್ನು ಖರೀದಿಸುವಾಗ ಪೌಷ್ಟಿಕಾಂಶ ಬಗೆಗಿನ ಲೇಬಲ್ ಓದಿ. ಈ ಮೂಲಕ ಇದರಲ್ಲಿ ಹೊಂದಿರುವ ಸೋಡಿಯಂ ಅಂಶದ ಬಗ್ಗೆ ತಿಳಿದುಕೊಳ್ಳಿ.
ಕೃಪೆ: indiatoday.in