ನಿಮ್ಮಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ?: ಅವರ ಪೌಷ್ಟಿಕತೆಗೆ ಸಪ್ತಸೂತ್ರಗಳು

Update: 2023-08-06 02:58 GMT

Photo: @UNICEF

ಆರೋಗ್ಯಕರ ಆಹಾರಕ್ರಮವನ್ನು ಕಲಿತುಕೊಳ್ಳಲು, ತಮ್ಮ ದೇಹ ಮತ್ತು ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸಮಯವೆಂದರೆ ಬಾಲ್ಯ. ಈಗ ಇವರಿಗೆ ಪಾಕೆಟ್ ಮನಿ ಇದೆ. ಸಾಮಾಜಿಕ ವೇಳಾಪಟ್ಟಿಯೂ ಇದೆ. ಇದರಿಂದ ಅವರು ತಮ್ಮದೇ ಜೀವನಶೈಲಿ ನಿರ್ಧಾರ ಕೈಗೊಳ್ಳುವ ಎಲ್ಲ ಅವಕಾಶವಿದೆ. ಈ ವಯಸ್ಸಿನಲ್ಲಿ ಮಕ್ಕಳು ಬೇಗನೇ ತಿಳಿದುಕೊಳ್ಳುತ್ತಾರೆ. ಅವರ ಸ್ನೇಹಿತರು ಹಾಗೂ ಕಾರ್ಯಕ್ರಮಗಳು ಕೂಡಾ ಅವರ ಮೇಲೆ ಪರಿಣಾಮ ಬೀರುತ್ತವೆ.

ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಇದು ಒಳ್ಳೆಯ ಸಮಯ. ಈ ವಯಸ್ಸಿನಲ್ಲಿ ಮಕ್ಕಳು ಮತ್ತು ಅವರ ಆಹಾರ ಕ್ರಮದ ಬಗ್ಗೆ ಒಳ್ಳೆಯ ಸಂಬಂಧ ಬೆಳೆಸುವುದು ಅಗತ್ಯ, ಮಕ್ಕಳಿಗೆ ಸಮತೋಲಿತ ಹಾಗೂ ಸಂಪೂರ್ಣ ಪೌಷ್ಟಿಕ ಆಹಾರ ಲಭ್ಯವಾಗುವಂತೆ ಮಾಡಬೇಕಾದ್ದು ಅಗತ್ಯ,

ಪ್ರತಿದಿನ ಬೆಳಿಗ್ಗೆ ಪೌಷ್ಟಿಕಾಂಶಯುಕ್ತ ಉಪಾಹಾರ ಸೇವಿಸಲು ಉತ್ತೇಜಿಸಿ. ಇದರಲ್ಲಿ ಇಡಿಯ ಕಾಳು, ಪ್ರೊಟೀನ್, ಹಣ್ಣು ಅಥವಾ ತರಕಾರಿ ಸೇರಿರಲಿ. ಸಾಕಷ್ಟು ತಾಜಾ ಹಾಗೂ ಆಯಾ ಋತುಮಾನದ ಹಣ್ಣುಗಳನ್ನು ಸೇರಿಸಿ ಆಹಾರವನ್ನು ವೈವಿಧ್ಯಮಯಗೊಳಿಸಿ.

ಅಂತೆಯೇ ಶಾಲೆಗೆ ತೆರಳುವಾಗ ಪೌಷ್ಟಿಕ ಮಧ್ಯಾಹ್ನದೂಟ ಮತ್ತು ಮನೆಯಲ್ಲೇ ತಯಾರಿಸಿದ ತಿಂಡಿ ತಿನಸುಗಳನ್ನು ಅಭ್ಯಾಸ ಮಾಡಿಸಿ. ಹೆಚ್ಚು ನೀರು ಕುಡಿಯುವುದು, ಪ್ರತಿ ಊಟದಲ್ಲಿ ಹಣ್ಣು- ತರಕಾರಿ ಇರುವಂತೆ ಮಾಡುವುದು, ಅಧಿಕ ಸಕ್ಕರೆಯ ಮತ್ತು ಸಂಸ್ಕರಿತ ಆಹಾರವನ್ನು ಮಿತಿಗೊಳಿಸುವುದು, ಶಾಲೆಯ ಬಳಿಕ ಕೂಡಾ ಆರೋಗ್ಯಕರ ಆಹಾರ ಒದಗಿಸುವುದು, ಊಟದ ಯೋಜನೆ ಮತ್ತು ಅಡುಗೆಯ ವೇಳೆ ಮಕ್ಕಳನ್ನು ಜೋಡಿಸಿಕೊಳ್ಳುವುದು. ಹೆಚ್ಚು ಆಹಾರ ಸೇವಿಸದೆಯೇ ಸಾಕಷ್ಟು ಪೌಷ್ಟಿಕಾಂಶಗಳು ಸಿಗುವಂತೆ ಮಾಡುವ ಜತೆಗೆ ನಾವು ಮಾದರಿಯಾಗಿದ್ದುಕೊಂಡು ಒಳ್ಳೆಯ ಹವ್ಯಾಸಗಳನ್ನು ರೂಢಿಸುವುದು ಅಗತ್ಯ.

ಕೃಪೆ: ndtv.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News