ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಈ 5 'ಸೂಪರ್ ಫುಡ್' ಸಹಕಾರಿ

Update: 2023-08-07 18:31 GMT

ಸಾಂದರ್ಭಿಕ ಚಿತ್ರ | Photo: NDTV 

ಹೃದಯ ಆರೋಗ್ಯ ವಿಶ್ವಾದ್ಯಂತ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಜನತೆಗೆ ಅತ್ಯಂತ ಕಳವಳ ಹುಟ್ಟಿಸಿರುವ ಅಂಶ. ಉತ್ತಮ ಜೀವನ ಸಾಗಿಸುವ ಹುಡುಕಾಟದಲ್ಲಿ ಹಲವು ಮಂದಿ 'ಸೂಪರ್ ಫುಡ್' ಅಂಶವನ್ನು ತಮ್ಮ ಊಟದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸಾಮಾನ್ಯವಾಗಿ ಗುಡ್ ಕೊಲೆಸ್ಟ್ರಾಲ್ ಎಂದು ಕರೆಸಿಕೊಳ್ಳುವ ಅಧಿಕ ಸಾಂದ್ರತೆಯ ಲಿಪೊಪ್ರೊಟೀನ್, ದೇಹದ ಆರೋಗ್ಯ ಸುಸ್ಥಿರವಾಗಿರಲು ಗಣನೀಯ ಕೊಡುಗೆ ನೀಡುತ್ತದೆ.

ಹೈದರಾಬಾದ್‍ನ ಯಶೋಧಾ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ವಿ.ರಾಜಶೇಖರ್ ಅವರ ಪ್ರಕಾರ, "ಎಚ್‍ಡಿಎಲ್ ಪದರ ಕ್ರೋಢೀಕರಣವು, ಅಧಿಕ ಕೊಲೆಸ್ಟ್ರಾಲ್ ಅನ್ನು ರಕ್ತನಾಳಗಳಿಂದ ನಿರ್ಮೂಲನೆಗಾಗಿ ಲಿವರ್‍ಗೆ ಸಾಗಿಸುವ ಮೂಲಕ ಹೃದ್ರೋಗ ಅಪಾಯವನ್ನು ಕಡಿಮೆ ಮಾಡುತ್ತದೆ".

ಇದೇ ಆಸ್ಪತ್ರೆಯ ಮತ್ತೊಬ್ಬ ವೈದ್ಯ ಡಾ.ದಿಲೀಪ್ ಗುಡೇ ಅವರ ಪ್ರಕಾರ, ಎಚ್‍ಡಿಎಲ್ ಮಟ್ಟ ಪುರುಷರಲ್ಲಿ 40ಎಂಜಿ/ಡಿಎಲ್ ಹಾಗೂ ಮಹಿಳೆಯರಲ್ಲಿ 50ಕ್ಕಿಂತ ಅಧಿಕ ಇರಬೇಕು.

ಇಂಥ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಸಾಮಥ್ರ್ಯ ಹೊಂದಿದ 5 ಸೂಪರ್‍ಫುಡ್‍ಗಳ ಬಗ್ಗೆ ತಿಳಿದುಕೊಳ್ಳೋಣ.

ಬೆಣ್ಣೆಹಣ್ಣು (Avocado): ಈ ವಿಶಿಷ್ಟ ಹಾಗೂ ಕೆನೆಯುಕ್ತ ಹಣ್ಣು, ಒಳ್ಳೆಯ ಕೊಬ್ಬಿನ ಅಂಶ ಹೊಂದಿದೆ. ಇದರ ಸೇವನೆ ಎಚ್‍ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಲಾಡ್, ಸ್ಯಾಂಡ್‍ವಿಚ್ ಮತ್ತು ಗ್ವಾಕಮೋಲ್ ಮೂಲಕ ಭಾರತೀಯ ಆಹಾರದಲ್ಲಿ ಇದನ್ನು ಸುಲಭವಾಗಿ ಸೇರಿಸಿಕೊಳ್ಳಬಹುದು.

ಕೊಬ್ಬಿದ ಮೀನು: ಸರ್ಡಿನೆಸ್, ಮಕೆರೆಲ್ ಮತ್ತು ಇತರ ಕೊಬ್ಬಿದ ಮೀನುಗಳು ಭಾರತದ ಕರಾವಳಿಗಳಲ್ಲಿ ಹೇರಳವಾಗಿದ್ದು, ಇದು ಒಮೇಗಾ-3 ಕೊಬ್ಬಿನ ಆ್ಯಸಿಡ್‍ಗಳ ಮೂಲವಾಗಿದೆ. ಇದು ಎಚ್‍ಡಿಎಲ್ ಮಟ್ಟ ಹೆಚ್ಚಿಸುವ ಜತೆಗೆ ಉರಿಯೂತವನ್ನು ಕಡಿಮೆ ಮಡುತ್ತದೆ ಹಾಗೂ ಹೃದಯ ಆರೋಗ್ಯವನ್ನು ವೃದ್ಧಿಸುತ್ತದೆ.

ಬಾದಾಮಿ, ಆಕ್ರೋಡ್ (ವಾಲ್ನಟ್), ಅಗಸೆಬೀಜ, ಚಿಯಾ ಬೀಜ ಪ್ರಮುಖ ಪೌಷ್ಟಿಕಾಂಶ ಹಾಗೂ ಆರೋಗ್ಯಕರ ಕೊಬ್ಬಿನಿಂದ ಕೂಡಿರುತ್ತವೆ. ಅಂತೆಯೇ ಓಲಿವ್ ಎಣ್ಣೆಯನ್ನು ಸಲಾಡ್‍ಗಳಲ್ಲಿ ಬಳಸುವುದು ಹಾಗೂ ತರಕಾರಿ ಹುರಿಯಲು ಇದನ್ನು ಬಳಸುವುದರಿಂದಲೂ ಎಚ್‍ಡಿಎಲ್ ಮಟ್ಟ ಹೆಚ್ಚುತ್ತದೆ. ಬೀನ್ಸ್ ಹಾಗೂ ಇತರ ಬೀಜಗಳು ಕೂಡಾ ಸಸ್ಯ ಆಧರಿತ ಪ್ರೊಟೀನ್‍ಗಳನ್ನು ಹೊಂದಿರುವುದರಿಂದ ಆರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಿಸುವ ಸಾಮಥ್ರ್ಯ ಹೊಂದಿವೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News