ಮಳೆಗಾಲದಲ್ಲಿ ಜಂಕ್ ಫುಡ್ ಏಕೆ ತಿನ್ನಬಾರದು?: ಇಲ್ಲಿದೆ ಮಾಹಿತಿ

Update: 2023-08-06 17:11 GMT

Photo: freepik.com

ಮಳೆಗಾಲ ಆರಂಭವಾಗುತ್ತಿದ್ದಂತೆ ಸಹಜವಾಗಿ ಪಕೋಡಾ, ಸಮೋಸಾ, ಗೋಲ್‍ಗಪ್ಪಾ ಅಥವಾ ಬಯಕೆಗಳನ್ನು ತೃಪ್ತಿಪಡಿಸುವ ಎಣ್ಣೆ ತಿಂಡಿಗಳಿಗೆ ಮಾರುಹೋಗುತ್ತೇವೆ. ಈ ಕುರುಕಲು ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅಪರೂಪಕ್ಕೊಮ್ಮೆ ತಿನ್ನುವುದು ಒಳ್ಳೆಯದು; ಆದರೆ ಮಳೆಗಾಲದಲ್ಲಿ ಇವುಗಳನ್ನು ಯಥೇಚ್ಛವಾಗಿ ಸೇವನೆ ಮಾಡುವುದು ಫುಡ್ ಪಾಯ್ಸನಿಂಗ್, ಜ್ವರ ಅಥವಾ ಶೀತಕ್ಕೆ ಕಾರಣವಾಗಬಹುದು.

ಮಳೆಗಾಲ ನಿಮಗೆ ಸೆಖೆಯಿಂದ ಮುಕ್ತಿ ಕೊಡಬಹುದಾದರೂ, ಹಲವು ಸೋಂಕು ಹಾಗೂ ರೋಗಗಳನ್ನು ಜತೆಗೆ ಕರೆ ತರುತ್ತದೆ. ನೀವು ಜಂಕ್‍ಫುಡ್ ಪ್ರಿಯರಾಗಿದ್ದರೆ ಈ ಸಾಧ್ಯತೆ ಮತ್ತಷ್ಟು ಅಧಿಕ. ಪೌಷ್ಟಿಕಾಂಶ ತಜ್ಞೆ ಮತ್ತು ಸಮಗ್ರ ಆರೋಗ್ಯ ತರಬೇತುದಾರರಾಗಿರುವ ಕರಿಷ್ಮಾ ಶಾ ಅವರ ಪ್ರಕಾರ, ಮನೆಯಲ್ಲೇ ತಯಾರಿಸಿದ ಆಹಾರವನ್ನು ಹೊರತುಪಡಿಸಿ ಹೊರಗಿನ ಆಹಾರವನ್ನು ಮಳೆಗಾಲದಲಿ ತಿನ್ನುವುದು ಫುಡ್‍ಪಾಯ್ಸನಿಂಗ್ ಅಥವಾ ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಬಹುದು.

ಹವಾಮಾನ ಬದಲಾಗುತ್ತಿರುವುದರಿಂದ ಕರಿದ ಪದಾರ್ಥಗಳನ್ನು ಸೇವಿಸುವುದು ಅಗತ್ಯ ಎಂದು ನೀವು ಭಾವಿಸಬಹುದು. ಆದರೆ ಇಂಥ ಆಹಾರಗಳು ಹೊಟ್ಟೆ ತುಂಬಿದ ಅನುಭವಕ್ಕೆ ಕಾರಣವಾಗುತ್ತವೆ. ಮಳೆಗಾಲದಲ್ಲಿ ಹೆಚ್ಚಿನ ವಾತಪ್ರಕೃತಿ ನಮ್ಮನ್ನು ಕರಿದ ಆಹಾರಕ್ಕೆ ಆಕರ್ಷಿಸುತ್ತದೆ" ಎಂದು ಅವರು ವಿವರಿಸುತ್ತಾರೆ.

ಮನೆಯಲ್ಲೇ ಸಿದ್ಧಪಡಿಸಿದ ಕರಿದ ಆಹಾರವನ್ನು ಮಿತವಾಗಿ ಸೇವಿಸುವುದರಿಂದ ಯಾವ ಸಮಸ್ಯೆಯೂ ಇಲ್ಲ. ಆದರೆ ಹೊರಗೆ ಇಂಥ ಪದಾರ್ಥಗಳನ್ನು ಮಾರಾಟ ಮಾಡುವವರು ಎಷ್ಟು ಬಾರಿ ಅದನ್ನು ಮತ್ತೆ ಮತ್ತೆ ಕರಿದಿರುತ್ತಾರೆ ಎನ್ನುವುದು ನಮಗೆ ತಿಳಿಯದು. ತಾಜಾ ಪದಾರ್ಥಗಳನ್ನು ಬಳಸಿ ಇಂಥ ಆಹಾರವನ್ನು ಮನೆಯಲ್ಲೇ ಸಿದ್ಧಪಡಿಸುವುದು ಒಳ್ಳೆಯದು ಎನ್ನುವ ಸಲಹೆ ಅವರದ್ದು.

ಬ್ರೆಡ್ ಅಥವಾ ಇತರ ಹುಳಿ ಬರಿಸಿದ ಆಹಾರ, ಹಸಿ ಸಲಾಡ್ ಅಥವಾ ತರಕಾರಿ, ಫಿಜ್ಜಾ ಮತ್ತು ಪಾಸ್ತಾದಂಥ ಆಹಾರಗಳನ್ನು ಸೇವಿಸದಿರುವುದು ಸೂಕ್ತ ಎಂದು ಅವರು ಹೇಳುತ್ತಾರೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News