ಕೆನಡಾ: ಭಾರತದ ರಾಜತಾಂತ್ರಿಕರ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಪ್ರತಿಭಟನೆ

Update: 2024-07-05 16:36 GMT

ಒಟ್ಟಾವ : ಕೆನಡಾದ ಒಟ್ಟಾವದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯ ವಿರುದ್ಧ ಖಾಲಿಸ್ತಾನ್ ಬೆಂಬಲಿಗರಿಂದ ಪ್ರತಿಭಟನೆ ನಡೆದಿದ್ದು ಕೆನಡಾದಲ್ಲಿ ಕಳೆದ 1 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಭಾರತದ ರಾಜತಾಂತ್ರಿಕರು 20ಕ್ಕೂ ಹೆಚ್ಚು ಪ್ರತಿಭಟನೆ ಎದುರಿಸಿದ್ದಾರೆ ಎಂದು ವರದಿಯಾಗಿದೆ.

ಸಿಖ್ ಪ್ರತ್ಯೇಕತಾವಾದಿ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ)' ಪ್ರತಿಭಟನೆಯನ್ನು ಆಯೋಜಿಸಿತ್ತು. ಕೆನಡಾ ರಾಜಧಾನಿ ಒಟ್ಟಾವದಲ್ಲಿ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮರ ಕಚೇರಿಯೆದುರು ಸೇರಿದ ಪ್ರತಿಭಟನಾಕಾರರು ಸುಮಾರು 5 ಗಂಟೆ ಅಲ್ಲಿ ಗುಂಪುಸೇರಿ ಭಾರತ ವಿರೋಧಿ ಘೋಷಣೆ ಕೂಗಿದರು. ಕಚೇರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಿರದಿದ್ದರೂ ಯಾವುದೇ ದೊಡ್ಡ ಅಡಚಣೆ ಆಗಿಲ್ಲ. ಕೆನಡಾ ಅಧಿಕಾರಿಗಳಿಗೆ ದೂರು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವರ್ಷದ ಜುಲೈಯಿಂದ ಕೆನಡಾದಲ್ಲಿ ಎಸ್ಎಫ್ಜೆ ನೇತೃತ್ವದಲ್ಲಿ ಭಾರತ ವಿರೋಧಿ ಪ್ರತಿಭಟನೆ ನಿರಂತರ ನಡೆಯುತ್ತಿದ್ದು ಆನ್ಲೈನ್ ವೇದಿಕೆಯಲ್ಲಿ ಭಾರತದ ಹೈಕಮಿಷನರ್, ಟೊರಂಟೊ ಮತ್ತು ವ್ಯಾಂಕೋವರ್ಗಳಲ್ಲಿನ ಭಾರತದ ಕಾನ್ಸುಲ್ ಜನರಲ್ಗಳ ಫೋಟೋ ಹಾಗೂ `ಭಾರತವನ್ನು ಕೊಲ್ಲಿ' ಎಂಬ ಪದಗಳಿರುವ ಬ್ಯಾನರ್ ಪ್ರದರ್ಶಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News