ಟ್ರಂಪ್ ರನ್ನು ಸೋಲಿಸಲು ನಾನೇ ಅತ್ಯುತ್ತಮ ವ್ಯಕ್ತಿ: ಬೈಡನ್

Update: 2024-07-08 16:45 GMT

ಟ್ರಂಪ್ ,  ಬೈಡನ್ |  PC : PTI

ವಾಷಿಂಗ್ಟನ್ : ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾಕೆಂದರೆ 2024ರಲ್ಲಿಯೂ ಟ್ರಂಪ್ ರನ್ನು ಸೋಲಿಸಲು ನಾನೇ ಅತ್ಯುತ್ತಮ ವ್ಯಕ್ತಿ ಎಂದು ಖಚಿತವಾಗಿರದಿದ್ದರೆ ಮರು ಆಯ್ಕೆ ಬಯಸುತ್ತಿರಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಹಾಗೂ ಇತರೆಡೆಯ ಎಲ್ಲಾ ಊಹಾಪೋಹಗಳ ಹೊರತಾಗಿಯೂ ಕೊನೆಯವರೆಗೂ ರೇಸ್ನಲ್ಲಿ ಉಳಿಯಲು ಮತ್ತು ರಿಪಬ್ಲಿಕನ್ ಎದುರಾಳಿ ಡೊನಾಲ್ಡ್ ಟ್ರಂಪ್ರನ್ನು ಸೋಲಿಸಲು ದೃಢವಾಗಿ ಬದ್ಧನಾಗಿದ್ದೇನೆ. ಡೆಮೊಕ್ರಟಿಕ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ ಮತ್ತು ಮತದಾರರು ಸ್ಪಷ್ಟವಾಗಿ ಮತ್ತು ನಿರ್ಣಾಯಕವಾಗಿ ತನ್ನ ಪರ ನಿಂತಿದ್ದಾರೆ. ಸಂಪೂರ್ಣ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ತಾನು 87%ದಷ್ಟು ಅಂದರೆ 14 ದಶಲಕ್ಷ ಮತ ಪಡೆದಿದ್ದೇನೆ. 3,900 ಪ್ರತಿನಿಧಿಗಳು ತನಗೆ ಬೆಂಬಲ ನೀಡಿ ಡೆಮೊಕ್ರಟಿಕ್ ಅಭ್ಯರ್ಥಿಯಾಗಿ ಭಾರೀ ಬಹುಮತದೊಂದಿಗೆ ಆಯ್ಕೆ ಮಾಡಿದ್ದಾರೆ. ಆದ್ದರಿಂದ ಅವರ ಅಭಿಪ್ರಾಯವನ್ನು ಗೌರವಿಸಬೇಕಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News