ಕದನ ವಿರಾಮ ಒಪ್ಪಂದ: ಹಿಜ್ಬುಲ್ಲಾ- ಹಮಾಸ್ ಮಾತುಕತೆ

Update: 2024-07-05 16:39 GMT

PC : X 

ಬೈರೂತ್ : ಹಿಜ್ಬುಲ್ಲಾ ಮುಖಂಡ ಸಯ್ಯದ್ ಹಸನ್ ನಸ್ರಲ್ಲಾ ಮತ್ತು ಹಮಾಸ್ ಮುಖಂಡ ಖಲೀಲ್ ಅಲ್-ಹಯಾ ಗಾಝಾ ಪಟ್ಟಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಕದನ ವಿರಾಮ ಮಾತುಕತೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ನಡೆದ ಸಭೆಯಲ್ಲಿ ಇಬ್ಬರೂ ಗಾಝಾ ಪಟ್ಟಿಯಲ್ಲಿನ ಇತ್ತೀಚಿಗಿನ ಭದ್ರತೆ ಮತ್ತು ರಾಜಕೀಯ ಬೆಳವಣಿಗೆಗಳನ್ನು ಪರಿಶೀಲಿಸಿದರು. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಾತುಕತೆ, ಮತ್ತು ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನೀಯರ ವಿರುದ್ಧದ ವಿಶ್ವಾಸಘಾತುಕ ಆಕ್ರಮಣವನ್ನು ಕೊನೆಗೊಳಿಸಲು ಪ್ರಸ್ತುತಪಡಿಸಿದ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಮೂಲಗಳು ಹೇಳಿಕೆ ನೀಡಿವೆ. ಗಾಝಾದಲ್ಲಿ ಕದನ ವಿರಾಮ ಜಾರಿಯಾದ ತಕ್ಷಣ ಲೆಬನಾನ್ನಲ್ಲಿಯೂ ಕದನ ವಿರಾಮ ಜಾರಿಯಾಗುತ್ತದೆ ಎಂದು ಹಿಜ್ಬುಲ್ಲಾ ಹೇಳಿದೆ.

ಹಮಾಸ್ನ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರು ಖತರ್ ಮತ್ತು ಈಜಿಪ್ಟ್ನಲ್ಲಿ ಮಧ್ಯವರ್ತಿ ಸಹೋದರರನ್ನು ಭೇಟಿಯಾಗಿ, ಕದನ ವಿರಾಮ ಒಪ್ಪಂದದ ಬಗ್ಗೆ ಹೊಸ ಪ್ರಸ್ತಾವನೆಯನ್ನು ಮುಂದಿರಿಸಿದ್ದರು ಎಂದು ಹಮಾಸ್ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News