ಕೌಲಲಾಂಪುರ ವಿಮಾನ ನಿಲ್ದಾಣದಲ್ಲಿ ಗ್ಯಾಸ್ ಸೋರಿಕೆ; 39 ಮಂದಿ ಅಸ್ವಸ್ಥ

Update: 2024-07-05 16:30 GMT

ಸಾಂದರ್ಭಿಕ ಚಿತ್ರ

ಕೌಲಲಾಂಪುರ: ಮಲೇಶ್ಯಾದ ಕೌಲಲಾಂಪುರ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಅನಿಲ ಸೋರಿಕೆಯಾಗಿ ಸುಮಾರು 39 ಮಂದಿ ಅಸ್ವಸ್ಥರಾಗಿರುವುದಾಗಿ ವರದಿಯಾಗಿದೆ.

ವಿಮಾನ ಇಂಜಿನಿಯರಿಂಗ್ ವಿಭಾಗದಲ್ಲಿ ಅನಿಲ ಸೋರಿಕೆಯಾಗಿದೆ. ಆದರೆ ಯಾವುದೇ ಪ್ರಯಾಣಿಕರಿಗೆ ಸಮಸ್ಯೆಯಾಗಿಲ್ಲ ಮತ್ತು ವಿಮಾನ ಸಂಚಾರಕ್ಕೆ ಅಡಚಣೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ನಿಲ್ದಾಣದ ದಕ್ಷಿಣ ಏರ್ಕ್ರಾಫ್ಟ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ಥಳೀಯ ಸಮಯ 11.23 ಗಂಟೆಗೆ ರಾಸಾಯನಿಕ ಸೋರಿಕೆಯಾಗಿರುವ ಬಗ್ಗೆ ತುರ್ತು ಕರೆ ಬಂದಿದೆ. ಇಂಜಿನಿಯರಿಂಗ್ ವಿಭಾಗವು ಪ್ರಯಾಣಿಕರ ಟರ್ಮಿನಲ್ನಿಂದ ಪ್ರತ್ಯೇಕವಾಗಿದ್ದು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 39 ಮಂದಿ ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಇಲ್ಲಿ ಬಳಕೆಯಾಗದ ಟ್ಯಾಂಕ್ ಒಂದರಲ್ಲಿದ್ದ ಎಲ್ಪಿಜಿ ಅನಿಲ ಸೋರಿಕೆಯಾಗುತ್ತಿರುವುದನ್ನು ಪತ್ತೆಹಚ್ಚಿ ದುರಸ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News