ವಾಷಿಂಗ್ಟನ್‍ನಲ್ಲಿ ಶೂಟೌಟ್ ಇಬ್ಬರು ಸಾವು; 5 ಮಂದಿಗೆ ಗಾಯ

Update: 2024-03-17 18:09 GMT

ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿ ರವಿವಾರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ಇತರ 5 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ವಾಷಿಂಗ್ಟನ್‍ನ ನೆರೆಯ ನಗರದಲ್ಲಿ ರವಿವಾರ ಬೆಳಿಗ್ಗೆ 3 ಗಂಟೆಗೆ ಗುಂಡಿನ ದಾಳಿ ನಡೆದಿದ್ದು ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ಸಿಸಿಟಿವಿಯ ದಾಖಲೆಯನ್ನು ಪರಿಶೀಲಿಸಿ ಶಂಕಿತರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News