ಇಟಲಿ ಬಳಿ ದೋಣಿ ಮುಳುಗಿ 11 ವಲಸಿಗರ ಮೃತ್ಯು; 64 ಮಂದಿ ನಾಪತ್ತೆ

Update: 2024-06-18 15:44 GMT

ಸಾಂದರ್ಭಿಕ ಚಿತ್ರ

ರೋಮ್: ಇಟಲಿಯ ದಕ್ಷಿಣ ಕರಾವಳಿಯ ಬಳಿ ಎರಡು ಪ್ರತ್ಯೇಕ ದುರಂತದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿಗಳು ಮುಳುಗಿ ಕನಿಷ್ಠ 11 ವಲಸಿಗರು ಮೃತಪಟ್ಟಿದ್ದು ಇತರ 64 ಮಂದಿ ನಾಪತ್ತೆಯಾಗಿದ್ದಾರೆ. 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಯ ಹೇಳಿಕೆ ತಿಳಿಸಿದೆ.

ಪ್ರಥಮ ಪ್ರಕರಣದಲ್ಲಿ 8 ದಿನಗಳ ಹಿಂದೆ ಟರ್ಕಿಯಿಂದ ಪ್ರಯಾಣ ಆರಂಭಿಸಿದ್ದ ದೋಣಿಯು ನೈಋತ್ಯ ಇಟಲಿಯ ಕ್ಯಲಾಬ್ರಿಯಾ ಪ್ರದೇಶದ ಬಳಿ ಸಾಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು ದೋಣಿ ಮುಳುಗಿದೆ. ಇದೇ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಫ್ರಾನ್ಸ್‍ನ ಹಡಗು ಇಟಲಿಯ ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ದೋಣಿಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. ಆದರೆ ಹಲವರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಇಟಲಿಯ ಲ್ಯಾಂಪೆಡುಸಾ ದ್ವೀಪದಲ್ಲಿ ದೋಣಿ ಮುಳುಗಿದ್ದು ದೋಣಿಯಲ್ಲಿದ್ದ 51 ಮಂದಿಯನ್ನು ರಕ್ಷಿಸಲಾಗಿದೆ. 10 ಮಂದಿ ಮೃತಪಟ್ಟಿದ್ದಾರೆ ಎಂದು ಇಟಲಿಯ ಸಮುದ್ರಮಾರ್ಗ ರಕ್ಷಣಾ ಸಮನ್ವಯ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News