ವಾಯು ಒತ್ತಡಕ್ಕೆ ಸಿಲುಕಿದ ಖತರ್ ವಿಮಾನ : 12 ಮಂದಿಗೆ ಗಾಯ

Update: 2024-05-26 22:58 IST
ವಾಯು ಒತ್ತಡಕ್ಕೆ ಸಿಲುಕಿದ ಖತರ್ ವಿಮಾನ : 12 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ | PC : NDTV

  • whatsapp icon

ದೋಹ : ದೋಹದಿಂದ ಐರ್‍ಲ್ಯಾಂಡ್‍ನ ಡಬ್ಲಿನ್‍ಗೆ ಪ್ರಯಾಣಿಸುತ್ತಿದ್ದ ಖತರ್ ಏರ್‍ವೇಸ್‍ನ ವಿಮಾನವು ತೀವ್ರ ವಾಯುಒತ್ತಡಕ್ಕೆ ಸಿಲುಕಿ ಓಲಾಡಿದ್ದರಿಂದ 12 ಜನರು ಗಾಯಗೊಂಡಿದ್ದಾರೆ. ಆದರೆ ವಿಮಾನ ನಿಗದಿತ ರೀತಿಯಲ್ಲಿಯೇ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಡಬ್ಲಿನ್ ವಿಮಾನ ನಿಲ್ದಾಣದ ಹೇಳಿಕೆ ತಿಳಿಸಿದೆ.

ಖತರ್ ಏರ್‍ವೇಸ್‍ನ ಬೋಯಿಂಗ್ 787 ಡ್ರೀಮ್‍ಲೈನರ್ ವಿಮಾನ ನಿಗದಿತ ಸಮಯದಲ್ಲಿ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ 6 ಪ್ರಯಾಣಿಕರು ಮತ್ತು 6 ಸಿಬಂದಿ ಗಾಯಗೊಂಡಿದ್ದರಿಂದ ವಿಮಾನ ನಿಲ್ದಾಣದಲ್ಲಿ ಪೊಲೀಸ್, ಅಗ್ನಿಶಾಮಕ ಪಡೆ, ರಕ್ಷಣಾ ತಂಡದ ಸಹಿತ ತುರ್ತು ಸೇವಾ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News