ಫಿಲಿಪ್ಪೀನ್ಸ್ | ಸಮುದ್ರ ಆಮೆಯ ಖಾದ್ಯ ತಿಂದು ಮೂವರು ಮೃತ್ಯು

Update: 2024-12-02 20:12 IST
Photo of  Sea Turtle

ಸಮುದ್ರ ಆಮೆ | PC : PTI

  • whatsapp icon

ಮನಿಲಾ: ಫಿಲಿಪ್ಪೀನ್ಸ್ ನಲ್ಲಿ ಅಳಿವಿನ ಅಂಚಿನಲ್ಲಿರುವ ಸಮುದ್ರ ಆಮೆಯ ಖಾದ್ಯ ತಿಂದು 3 ಮಂದಿ ಸಾವನ್ನಪ್ಪಿದ್ದು, ಇತರ 32 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಮಾಗುಯಿಂಡಾನೊ ಡೆಲ್‍ನೊರ್ಟೆ ಪ್ರಾಂತದ ಕರಾವಳಿ ನಗರದಲ್ಲಿ ಕಳೆದ ವಾರ ಸಮುದ್ರ ಆಮೆಯ ಖಾದ್ಯ ತಿಂದ ಟೆಡುರೆ ಬುಡಕಟ್ಟಿನ ಹಲವಾರು ಮಂದಿ ಅತಿಸಾರ, ವಾಂತಿ ಮತ್ತು ಕಿಬ್ಬೊಟ್ಟೆಯ ಸೆಳೆತದಂತಹ ರೋಗ ಲಕ್ಷಣಗಳನ್ನು ಅನುಭವಿಸಲು ಆರಂಭಿಸಿದರು. ಫಿಲಿಪ್ಪೀನ್ಸ್ ನ ಪರಿಸರ ರಕ್ಷಣಾ ಕಾಯ್ದೆಯಡಿ ಸಮುದ್ರ ಆಮೆಗಳನ್ನು ಬೇಟೆಯಾಡುವುದು ಅಥವಾ ತಿನ್ನುವುದನ್ನು ನಿಷೇಧಿಸಲಾಗಿದ್ದರೂ ಕೆಲವು ಬುಡಕಟ್ಟು ಸಮುದಾಯದವರು ಅದನ್ನು ಸಾಂಪ್ರದಾಯಿಕ ಖಾದ್ಯ ಪದಾರ್ಥವೆಂದು ಪರಿಗಣಿಸಿದ್ದಾರೆ.

ಇದೇ ಖಾದ್ಯವನ್ನು ತಿಂದ ಕೆಲವು ನಾಯಿಗಳು, ಬೆಕ್ಕುಗಳು ಹಾಗೂ ಕೋಳಿಗಳೂ ಮೃತಪಟ್ಟಿವೆ. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಆಮೆಗಳು ವಿಷಕಾರಿ ವಸ್ತುಗಳನ್ನು ತಿಂದಿರಬಹುದು. ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.   

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News