ಕದನ ವಿರಾಮ | ಇಸ್ರೇಲ್ ನ ನಾಲ್ವರು ಮಹಿಳಾ ಸೈನಿಕರನ್ನು ರೆಡ್ ಕ್ರಾಸ್ ಗೆ ಹಸ್ತಾಂತರಿಸಿದ ಹಮಾಸ್
Update: 2025-01-25 15:42 IST

Photo credit: PTI
ಜೆರುಸಲೇಂ : ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ ನ ನಾಲ್ವರು ಮಹಿಳಾ ಸೈನಿಕರನ್ನು ಹಮಾಸ್ ರೆಡ್ ಕ್ರಾಸ್ ಗೆ ಹಸ್ತಾಂತರಿಸಿದೆ.
ಈ ಬಿಡುಗಡೆಯು ಗಾಝಾ ಕದನ ವಿರಾಮ ಒಪ್ಪಂದದ ಎರಡನೇ ಹಂತದ ವಿನಿಮಯದ ಭಾಗವಾಗಿದ್ದು, ಮುಂಬರುವ ಕೆಲ ಗಂಟೆಗಳಲ್ಲಿ ಇಸ್ರೇಲ್ ಜೈಲುಗಳಲ್ಲಿರುವ 200 ಫೆಲೆಸ್ತೀನಿಯನ್ನರ ಬಿಡುಗಡೆ ನಿರೀಕ್ಷೆಯಿದೆ.
ಇಸ್ರೇಲ್ ನ ಬಾಂಬ್ ದಾಳಿ ವೇಳೆ ಉತ್ತರ ಗಾಝಾದಿಂದ ಬಲವಂತವಾಗಿ ಸ್ಥಳಾಂತರಗೊಂಡ ಲಕ್ಷಾಂತರ ಫೆಲೆಸ್ತೀನಿ ನಾಗರಿಕರು ಕದನ ವಿರಾಮದ ಹಿನ್ನೆಲೆ ತಮ್ಮ ಮೂಲ ಸ್ಥಳಗಳಿಗೆ ಮರಳುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಗಾಝಾದಲ್ಲಿ 15 ತಿಂಗಳ ಯುದ್ಧವನ್ನು ನಿಲ್ಲಿಸಿದ ಕದನ ವಿರಾಮದ ಮೊದಲ ದಿನದಂದು ಇಸ್ರೇಲ್ 90 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಹಮಾಸ್ ರವಿವಾರ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು.