ಇಸ್ರೇಲ್ ದಾಳಿಯಲ್ಲಿ ಸಿರಿಯಾದ 5 ಯೋಧರು ಮೃತ್ಯು : ವರದಿ

Update: 2024-09-27 16:24 GMT

PC : PTI (ಸಾಂದರ್ಭಿಕ ಚಿತ್ರ)

ದಮಾಸ್ಕಸ್ : ಶುಕ್ರವಾರ ಲೆಬನಾನ್ ಗಡಿಭಾಗದ ಸಮೀಪ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಿರಿಯಾದ ಐವರು ಯೋಧರು ಸಾವನ್ನಪ್ಪಿರುವುದಾಗಿ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಸಿರಿಯಾದ ಸರಕಾರಿ ಸ್ವಾಮ್ಯದ ʼಸನಾ ಸುದ್ದಿಸಂಸ್ಥೆʼ ವರದಿ ಮಾಡಿದೆ.

ಸಿರಿಯಾ-ಲೆಬನಾನ್ ಗಡಿಭಾಗದ ಸನಿಹದಲ್ಲಿರುವ ಕೆಫಾರ್ ಯಬೂಸ್ ನಗರದಲ್ಲಿರುವ ನಮ್ಮ ಮಿಲಿಟರಿ ನೆಲೆಯ ಮೇಲೆ ಇಸ್ರೇಲಿ ಶತ್ರು ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಯೋಧರು ಹತರಾಗಿದ್ದು ಓರ್ವ ಗಾಯಗೊಂಡಿದ್ದಾನೆ ಎಂದು ವರದಿ ಹೇಳಿದೆ. ಈ ಮಧ್ಯೆ, ಸಿರಿಯಾ- ಲೆಬನಾನ್ ಗಡಿಯುದ್ದಕ್ಕೂ ಲೆಬನಾನ್ನ ಲ್ಲಿರುವ ಹಿಜ್ಬುಲ್ಲಾಗಳಿಗೆ ಸಿರಿಯಾದಿಂದ ಶಸ್ತ್ರಾಸ್ತ್ರ ವರ್ಗಾಯಿಸಲು ಬಳಸಲಾಗುವ ವ್ಯವಸ್ಥೆಗಳನ್ನು ಗುರಿಯಾಗಿಸಿ ತನ್ನ ಯುದ್ಧವಿಮಾನಗಳು ತೀವ್ರ ದಾಳಿ ನಡೆಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಸಿರಿಯಾದ ಕ್ಯುಸಾಯರ್ ಪ್ರದೇಶವನ್ನು ಲೆಬನಾನ್ಗೆಿ ಸಂಪರ್ಕಿಸುವ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಅನ್ನು ಗುರಿಯಾಗಿಸಿ ಇಸ್ರೇಲ್ ಯುದ್ಧವಿಮಾನಗಳು ನಡೆಸಿದ ದಾಳಿಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಸ್ಥೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News