ಪಾಕಿಸ್ತಾನ: ಬಾಂಬ್ ದಾಳಿಯಲ್ಲಿ 8 ಯೋಧರ ಸಹಿತ 9 ಮಂದಿ ಸಾವು

Update: 2025-03-29 21:21 IST
ಪಾಕಿಸ್ತಾನ: ಬಾಂಬ್ ದಾಳಿಯಲ್ಲಿ 8 ಯೋಧರ ಸಹಿತ 9 ಮಂದಿ ಸಾವು

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಪೇಷಾವರ: ಪಶ್ಚಿಮ ಪಾಕಿಸ್ತಾನದ ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 8 ಯೋಧರ ಸಹಿತ 9 ಮಂದಿ ಮೃತಪಟ್ಟಿದ್ದು 6 ಯೋಧರು ಗಾಯಗೊಂಡಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.

ವಾಯವ್ಯ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಸಶಸ್ತ್ರ ತಾಲಿಬಾನ್ಗಳ ವಿರುದ್ಧದ ಭದ್ರತಾ ಕಾರ್ಯಾಚರಣೆಯಲ್ಲಿ 7 ಯೋಧರು ಸಾವನ್ನಪ್ಪಿದ್ದಾರೆ. ಮನೆಯೊಂದರಲ್ಲಿ ಅಡಗಿದ್ದ ದುಷ್ಕರ್ಮಿಗಳು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾರೆ. ಸೇನೆಯ ಕಾರ್ಯಾಚರಣೆಗೆ ಹೆಲಿಕಾಪ್ಟರ್ಗಳನ್ನು ಬಳಸಿದ್ದು 8 ತಾಲಿಬಾನ್ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನದ ದಕ್ಷಿಣದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಮೋಟಾರ್ ಬೈಕ್ ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಿಸಿ ಓರ್ವ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News