ಗಾಝಾ ಆಸ್ಪತ್ರೆಯ ರೋಗಿಗಳ ಸ್ಥಳಾಂತರಕ್ಕೆ ಯೋಜನೆ: ವಿಶ್ವ ಆರೋಗ್ಯ ಸಂಸ್ಥೆ

Update: 2023-11-21 17:18 GMT

Photo: PTI

ಜಿನೆವಾ: ರೋಗಿಗಳ ಸ್ಥಳಾಂತರ ಕಾರ್ಯದಲ್ಲಿ ನೆರವಾಗುವಂತೆ ಗಾಝಾದಲ್ಲಿನ ಮೂರು ಆಸ್ಪತ್ರೆಗಳು ಕೋರಿಕೆ ಸಲ್ಲಿಸಿದ್ದು ಈ ಕುರಿತ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಮಂಗಳವಾರ ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಗಾಝಾದ ಆಸ್ಪತ್ರೆಗಳು ಬಾಂಬ್ ದಾಳಿಗೆ ಒಳಗಾಗಿವೆ. ಉತ್ತರ ಗಾಝಾದಲ್ಲಿನ ಎಲ್ಲಾ ಆಸ್ಪತ್ರೆಗಳೂ ಸಾಮಾನ್ಯ ರೀತಿಯಲ್ಲಿ ಸಹಜವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಆದರೂ ಪಲಾಯನ ಮಾಡಲು ಸಾಧ್ಯವಾಗದ ಮತ್ತು ಸ್ಥಳಾಂತರಿಸಲು ಸಾಧ್ಯವಾಗದ ಕೆಲವು ರೋಗಿಗಳು ಈಗಲೂ ಅಲ್-ಶಿಫಾ, ಇಂಡೊನೇಶ್ಯನ್ ಆಸ್ಪತ್ರೆ ಮತ್ತು ಅಲ್ಅಹಿಲ್ ಆಸ್ಪತ್ರೆಗಳಲ್ಲಿದ್ದಾರೆ. ಈಗ ಅವರನ್ನು ಅಲ್ಲಿಂದ ತೆರವುಗೊಳಿಸುವುದು ಅಂತಿಮ ದಾರಿಯಾಗಿದ್ದು ಇದಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಮಿಯರ್ ಜಿನೆವಾದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News