ಅಮೆರಿಕ: ಬೋಯಿಸ್ ವಿಮಾನ ನಿಲ್ದಾಣದ ಶೆಡ್ ಕುಸಿದು 3 ಮಂದಿ ಸಾವು

Update: 2024-02-01 16:22 GMT

Photo; yahoo.com

ವಾಷಿಂಗ್ಟನ್ : ಅಮೆರಿಕದ ಇಡಾಹೊ ನಗರದ ಬೋಯಿಸ್ ವಿಮಾನ ನಿಲ್ದಾಣದ ನಿರ್ಮಾಣ ಹಂತದ ಶೆಡ್ ಕುಸಿದು ಮೂರು ಮಂದಿ ಸಾವನ್ನಪ್ಪಿದ್ದು ಕನಿಷ್ಟ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ಶೆಡ್ ಹಾಗೂ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಉರುಳಿಬಿದ್ದಿದ್ದು ಅದರಡಿ ಸಿಲುಕಿ 3 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಸಿದುಬಿದ್ದ ಕಟ್ಟಡದ ಅವಶೇಷಗಳು ನಿಲ್ದಾಣದ ಬಳಿಯ ರಸ್ತೆಗೂ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News