ಅಮೆರಿಕ: ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

Update: 2023-11-23 16:47 GMT

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಅಮೆರಿಕದ ಓಹಿಯೊ ರಾಜ್ಯದಲ್ಲಿ 26 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಸಿನ್ಸಿನಾಟಿ ಮೆಡಿಕಲ್ ಕಾಲೇಜಿನ 4ನೇ ವರ್ಷದ ಮೆಡಿಕಲ್ ಶಿಕ್ಷಣ ವಿದ್ಯಾರ್ಥಿಯಾಗಿದ್ದ 26 ವರ್ಷದ ಆದಿತ್ಯ ಅದ್ಲಾಖ ಹತ್ಯೆಯಾದ ವಿದ್ಯಾರ್ಥಿ. ನ.9ರಂದು ಓಹಿಯೊದ ವೆಸ್ಟರ್ನ್ ಹಿಲ್ಸ್ ಪ್ರದೇಶದ ರಸ್ತೆಯ ಬದಿಗೆ ಅಪ್ಪಳಿಸಿದ್ದ ಕಾರಿನೊಳಗೆ ಗುಂಡೇಟು ಬಿದ್ದಿರುವ ವ್ಯಕ್ತಿ ಇರುವ ಬಗ್ಗೆ ಇತರ ವಾಹನ ಚಾಲಕರು ಮಾಹಿತಿ ನೀಡಿದ ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರ ಗಾಯಗೊಂಡು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಸಿನ್ಸಿನಾಟಿ ಪೊಲೀಸ್ ವಿಭಾಗದ ಮುಖ್ಯಸ್ಥ ಜೊನಾಥನ್ ಕನ್ನಿಂಗ್ಹಾಮ್ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News