ಅಮೆರಿಕಾ: ಮೂವರು ಫೆಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ

Update: 2023-11-27 16:54 GMT

ಹಾಷಿಮ್ ಅವರ್ತಾನಿ, ಹೇವ್ಫೋರ್ಡ್ ̧ವಿವಿಯ ವಿದ್ಯಾರ್ಥಿ ಕಿನ್ನಾನ್ ಅಬ್ದುಲ್ ಹಮೀದ್ | Photo: @hzomlot \ X

ವಾಷಿಂಗ್ಟನ್: ಅಮೆರಿಕಾದ ವೆರ್ಮಾಂಟ್ ರಾಜ್ಯದ ಬರ್ಲಿಂಗ್ಟನ್ ನಲ್ಲಿ ಮೂವರು ಫೆಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಇದು ದ್ವೇಷಾಪರಾಧದ ಪ್ರಕರಣವಾಗಿದ್ದು ತನಿಖೆ ನಡೆಸಬೇಕು ಎಂದು ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬದವರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 ಗಾಯಗೊಂಡವರನ್ನು ಬ್ರೌನ್ ವಿವಿಯ ವಿದ್ಯಾರ್ಥಿ ಹಾಷಿಮ್ ಅವರ್ತಾನಿ, ಹೇವ್ಫೋರ್ಡ್ ವಿವಿಯ ವಿದ್ಯಾರ್ಥಿ ಕಿನ್ನಾನ್ ಅಬ್ದುಲ್ ಹಮೀದ್, ಟ್ರಿನಿಟಿ ಕಾಲೇಜಿನ ವಿದ್ಯಾರ್ಥಿ ತಷೀನ್ ಅಹ್ಮದ್ ಎಂದು ಗುರುತಿಸಲಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ, ರಸ್ತೆಯಲ್ಲಿ ಎದುರಾದ ಶ್ವೇತವರ್ಣೀಯನೊಬ್ಬ ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಶಂಕಿತ ಆರೋಪಿ, 48 ವರ್ಷದ ಜೇಸನ್ ಜೆ. ಏಟನ್ನ್ನು ರವಿವಾರ ಬಂಧಿಸಲಾಗಿದೆ ಎಂದು `ಡೈಲಿ ಮಿರರ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News