ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ
Update: 2024-02-23 02:53 GMT
ವಾಷಿಂಗ್ಟನ್: ಹೋಸ್ಟನ್ ಮೂಲದ ಖಾಸಗಿ ಕಂಪನಿ ಉಡಾಯಿಸಿದ ಅಮೆರಿಕದ ಮೊಟ್ಟಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ನಾಸಾ ನೆರವಿನ ಈ ಯೋಜನೆಯಡಿ ವಾಣಿಜ್ಯ ರೊಬೋಟ್ ಗಳು ಬಾಹ್ಯಾಕಾಶ ಕಾರ್ಯಗಳನ್ನು ನಿರ್ವಹಿಸಲಿವೆ.
ಆದರೆ ಇಂಟಿಟ್ಯು ಮೆಷಿನ್ಸ್ ಅಭಿವೃದ್ಧಿಪಡಿಸಿರುವ ಒಡಿಸ್ಸೆಸ್ ಲ್ಯಾಂಡರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವ ಅಂಶ ಇನ್ನೂ ದೃಢಪಟ್ಟಿಲ್ಲ. ಆದರೆ ನೇರಪ್ರಸಾರದ ಉದ್ಘೋಷಕರು ಇಲ್ಲಿಂದ ಸಂಕೇತಗಳು ಬರುತ್ತಿವೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಗ್ರೀನ್ ವಿಚ್ ಸಮಯ 2323ಕ್ಕೆ ಇಳಿದಿದ್ದು, ಇದರ ವೇಗ ಗಂಟೆಗೆ 6500 ಕಿಲೋಮೀಟರ್ ಗಿಂತ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಬಾಹ್ಯಾಕಾಶ ನೌಕೆಯಿಂದ ಚಿತ್ರೀಕರಣ ಮಾಡುವ ಬಾಹ್ಯ ಈಗಲ್ ಕ್ಯಾಮ್ ಕಳುಹಿಸಿದ ಚಿತ್ರಗಳನ್ನು ಶೀಘ್ರ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಆದರೆ ಸದ್ಯಕ್ಕೆ ಯಾವುದೂ ದೃಢಪಟ್ಟಿಲ್ಲ