ಟ್ರಂಪ್ ಹತ್ಯೆಗೆ ಮತ್ತೊಂದು ಯತ್ನ?; ಇರಾನ್ ವಿರುದ್ಧ ಆರೋಪ
Update: 2024-11-09 16:49 GMT
ವಾಷಿಂಗ್ಟನ್: ಈ ವಾರದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಹತ್ಯೆಗೆ ಇರಾನ್ ವಿಫಲ ಪ್ರಯತ್ನ ನಡೆಸಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಶುಕ್ರವಾರ ಆರೋಪಿಸಿದೆ.
ಇರಾನ್‍ನ ಅರೆಸೇನಾ ಪಡೆ ರೆವೊಲ್ಯುಷನರಿ ಗಾರ್ಡ್‍ನ ಹೆಸರಿಸದ ಅಧಿಕಾರಿಯೊಬ್ಬರು ಟ್ರಂಪ್ ಮೇಲೆ ನಿಗಾ ಇಡುವ ಮತ್ತು ಅಂತಿಮವಾಗಿ ಕೊಲ್ಲುವ ಯೋಜನೆಯ ಗುತ್ತಿಗೆಯನ್ನು ಕಳೆದ ಸೆಪ್ಟಂಬರ್‍ನಲ್ಲಿ ರೂಪಿಸಿದ್ದರು. ಇದಕ್ಕಾಗಿ ಫರ್ಜಾದ್ ಶಾಕೇರಿ ಎಂಬ ವ್ಯಕ್ತಿಯನ್ನು ನಿಯೋಜಿಸಲಾಗಿದ್ದು ಚುನಾವಣೆಗೂ ಮುನ್ನ ಟ್ರಂಪ್‍ರನ್ನು ಹತ್ಯೆ ಮಾಡಲು ಸಾಧ್ಯವಾಗದಿದ್ದರೆ ಚುನಾವಣೆಯ ಬಳಿಕ ಮುಂದುವರಿಸುವಂತೆ ಸೂಚಿಸಲಾಗಿತ್ತು. ಚುನಾವಣೆಯಲ್ಲಿ ಟ್ರಂಪ್ ಸೋಲುವುದು ಖಚಿತವಾದ್ದರಿಂದ ಚುನಾವಣೆಯ ಬಳಿಕ ಹತ್ಯೆ ನಡೆಸುವುದು ಸುಲಭ ಎಂಬುದು ಇರಾನ್ ಅಧಿಕಾರಿಯ ಯೋಜನೆಯಾಗಿತ್ತು ಎಂದು ಮ್ಯಾನ್‍ಹಟನ್‍ನ ಫೆಡರಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ಈ ಆರೋಪವನ್ನು ಇರಾನ್ ನಿರಾಕರಿಸಿದೆ.