ಇಸ್ರೇಲ್‍ನಿಂದ ವರ್ಣಭೇದ ನೀತಿ: ಮೊಸಾದ್ ಮಾಜಿ ಮುಖ್ಯಸ್ಥರ ಖಂಡನೆ
ಟೆಲ್ ಅವೀವ್: ಪಶ್ಚಿಮದಂಡೆಯಲ್ಲಿ ಇಸ್ರೇಲ್ ವರ್ಣಭೇದ ನೀತಿಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಇಸ್ರೇಲ್‍ನ ಗುಪ್ತಚರ ಸಂಸ್ಥೆ ಮೊಸಾದ್‍ನ ಮಾಜಿ ಮುಖ್ಯಸ್ಥ ತಾಮಿರ್ ಪಾರ್ದೊ ಹೇಳಿರುವುದಾಗಿ ವರದಿಯಾಗಿದೆ.
ಇಲ್ಲಿ ವರ್ಣಭೇದ ನೀತಿಯಿದೆ. ಒಂದು ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಎರಡು ಪ್ರತ್ಯೇಕ ಕಾನೂನು ಇರುವುದಾದರೆ ಅದು ವರ್ಣಭೇದ ವ್ಯವಸ್ಥೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಸ್ರೇಲ್‍ನ ಪ್ರಜೆಯೊಬ್ಬ ದಿಗ್ಬಂಧನಕ್ಕೊಳಗಾದ ಗಾಝಾ ಪಟ್ಟಿಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಕಡೆ ಸಂಚರಿಸಬಹುದು. ಆದರೆ ಫೆಲಸ್ತೀನೀಯರಿಗೆ ಈ ಅವಕಾಶವಿಲ್ಲ. ಪಶ್ಚಿಮ ದಂಡೆಯಲ್ಲಿನ ವ್ಯವಸ್ಥೆ ಕುರಿತ ತನ್ನ ಹೇಳಿಕೆಯಲ್ಲಿ ಉತ್ಪ್ರೇಕ್ಷೆಯಿಲ್ಲ, ಇದು ವಾಸ್ತವ' ಎಂದು ಪಾರ್ದೊ ಹೇಳಿದ್ದಾರೆ.
ಮೊಸಾದ್‍ನ ಮುಖ್ಯಸ್ಥರಾಗಿ 2011ರಿಂದ 2016ರವರೆಗೆ ಕಾರ್ಯ ನಿರ್ವಹಿಸಿದ್ದ ಪಾರ್ದೊ ` ಇಸ್ರೇಲ್ ತುರ್ತು ಗಮನ ವಹಿಸಬೇಕಿರುವ ವಿಷಯ ಇರಾನ್‍ನ ಪರಮಾಣು ಕಾರ್ಯಕ್ರಮವಲ್ಲ, ಫೆಲಸ್ತೀನ್ ಬಿಕ್ಕಟ್ಟು. ಇಸ್ರೇಲ್ ತನ್ನ ಮತ್ತು ಫೆಲಸ್ತೀನಿಯರ ನಡುವೆ ಗಡಿಯನ್ನು ಗೊತ್ತುಪಡಿಸದಿದ್ದರೆ ಯೆಹೂದಿ ರಾಷ್ಟ್ರವಾಗಿ ಇಸ್ರೇಲ್‍ನ ಅಸ್ತಿತ್ವಕ್ಕೆ ಅಪಾಯ ಎದುರಾಗಲಿದೆ' ಎಂದು ಎಚ್ಚರಿಸಿದ್ದಾರೆ.