ಅಮೆರಿಕದಲ್ಲಿ ಹಲ್ಲೆ: ಭಾರತ ಮೂಲದ ಟೆಕ್ಕಿ ಮೃತ್ಯು

Update: 2024-02-11 02:58 GMT

ಮೃತ ಟೆಕ್ಕಿ ವಿವೇಕ್ ತನೇಜಾ Photo: twitter.com/knowmeideas

ವಾಷಿಂಗ್ಟನ್: ಅಮೆರಿಕದ ರಾಜಧಾನಿಯ ರೆಸ್ಟೋರೆಂಟ್ ನ ಹೊರಗೆ ಮಾರಣಾಂತಿಕ ಹಲ್ಲೆಗೀಡಾದ ಭಾರತೀಯ ಮೂಲದ 41 ವರ್ಷದ ಐಟಿ ಎಂಜಿನಿಯರ್ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇದು ಕಳೆದ ಎರಡು ತಿಂಗಳಲ್ಲಿ ಭಾರತ ಅಥವಾ ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳು ದಾಳಿಯಿಂದ ಮೃತಪಟ್ಟ ಏಳನೇ ಪ್ರಕರಣವಾಗಿದೆ.

ಮೃತ ಟೆಕ್ಕಿಯನ್ನು ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರ ಅಲೆಕ್ಸಾಂಡ್ರಿಯಾ ನಿವಾಸಿ ವಿವೇಕ್ ತನೇಜಾ ಎಂದು ಗುರುತಿಸಲಾಗಿದೆ. ಫೆಬ್ರವರಿ 2ರಂದು ಶ್ವೇತಭವನದಿಂದ ಏಳು ಬ್ಲಾಕ್ ದೂರ ಇರುವ 15ನೇ ಎನ್ ಡಬ್ಲ್ಯು ಬೀದಿಯ 1100 ಬ್ಲಾಕ್ ನಲ್ಲಿ ಈ ಹಲ್ಲೆ ನಡೆದಿತ್ತು.

ತಡರಾತ್ರಿ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂತ್ರಸ್ತ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಗಮನಿಸಿದ್ದಾರೆ. ತೀವ್ರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿವೇಕ್ ತನೇಜಾ ಅವರನ್ನು ಟ್ರಾಮಾ ಸೆಂಟರ್ ಗೆ  ಕರೆದೊಯ್ಯಲಾಗಿತ್ತು. ಫೆಬ್ರವರಿ 7ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ವಿಭಾಗ ಹೇಳಿಕೆ ನೀಡಿದೆ.

ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ಡಾಲರ್ ಬಹುಮಾನ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News