ಗಾಝಾ ಪಟ್ಟಿ | ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಿಂದ ವೈಮಾನಿಕ ದಾಳಿ ; ಕನಿಷ್ಠ 20 ಮಂದಿ ಮೃತ್ಯು

Update: 2024-05-19 16:25 GMT

 ಸಾಂದರ್ಭಿಕ ಚಿತ್ರ | PC : NDTV

ಗಾಝಾ ಪಟ್ಟಿ,  :ಗಾಝಾ ಪಟ್ಟಿಯ ನುಸಿರಾತ್ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿರುವ ಮನೆಯೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ಅಲ್-ಅಕ್ಸಾ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

ಮಕ್ಕಳ ಸಹಿತ ಹಲವರು ಗಾಯಗೊಂಡಿದ್ದಾರೆ. ದಾಳಿಯಿಂದ ನೆಲಸಮಗೊಂಡ ಕಟ್ಟಡದ ಅವಶೇಷಗಳಡಿ ಹಲವರು ಸಿಕ್ಕಿಬಿದ್ದಿರುವ ಶಂಕೆಯಿದೆ ಎಂದು ಫೆಲೆಸ್ತೀನ್‍ನ `ವಫಾ' ಸುದ್ಧಿಸಂಸ್ಥೆ ವರದಿ ಮಾಡಿದೆ. ರವಿವಾರ ಬೆಳಗ್ಗೆ 3 ಗಂಟೆಗೆ ದಾಳಿ ನಡೆದಿರುವುದಾಗಿ ಸ್ಥಳೀಯರು ಹೇಳಿದ್ದು ಈ ವರದಿಯನ್ನು ಪರಿಶೀಲಿಸುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಉತ್ತರ ಗಾಝಾದ ಜಬಾಲ ನಿರಾಶ್ರಿತರ ಶಿಬಿರದ ಸುತ್ತಮುತ್ತ ಹಮಾಸ್ ಮತ್ತು ಇಸ್ರೇಲ್ ಪದಾತಿ ದಳದ ನಡುವೆ ಸಂಘರ್ಷ ಮುಂದುವರಿದಿದೆ. ರಫಾ ಸೇರಿದಂತೆ ಗಾಝಾದ ಹಲವು ಮನೆಗಳನ್ನು ಗುರಿಯಾಗಿಸಿ ವೈಮಾನಿಕ ಮತ್ತು ಫಿರಂಗಿದಾಳಿ ನಡೆದಿದೆ. ಶುಕ್ರವಾರ ಗಾಝಾದಲ್ಲಿ ತನ್ನ ಇಬ್ಬರು ಯೋಧರು ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News