ಪಾಕಿಸ್ತಾನದ ಬಾಂಬ್‍ ನಿಷ್ಕ್ರಿಯ ದಳದ ಮೇಲೆ ದಾಳಿ; ಇಬ್ಬರು ಯೋಧರ ಮೃತ್ಯು

Update: 2024-04-01 18:06 GMT

ಲಾಹೋರ್: ಬಲೂಚಿಸ್ತಾನ್ ಪ್ರಾಂತದ ಬಂದರು ನಗರ ಗ್ವದರ್‍ನಲ್ಲಿ ಬಾಂಬ್ ನಿಷ್ಕ್ರಿಯ ತಂಡದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಕನಿಷ್ಟ ಇಬ್ಬರು ಯೋಧರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಗ್ವದರ್ ನಗರದ ಸುಮಾರು 25 ಕಿ.ಮೀ ದೂರದ ಅಂಕಾರಾ ಅಣೆಕಟ್ಟು ಪ್ರದೇಶದಲ್ಲಿ ನೆಲಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದ ತಂಡವನ್ನು ಗುರಿಯಾಗಿಸಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು ಇಬ್ಬರು ಯೋಧರು ಸಾವನ್ನಪ್ಪಿದ್ದು ಇತರ 4 ಯೋಧರು ಗಾಯಗೊಂಡಿದ್ದಾರೆ ಎಂದು ಡಾನ್ ಪತ್ರಿಕೆ ಸೋಮವಾರ ವರದಿ ಮಾಡಿದೆ. ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ. ದಾಳಿಕೋರರ ಪತ್ತೆಗೆ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಗ್ವದರ್ ಪೊಲೀಸ್ ಅಧಿಕಾರಿ ಮೊಹ್ಸಿನ್ ಝೊಹಾಯಬ್ ಹೇಳಿದ್ದಾರೆ. ಗ್ವದರ್‍ನಲ್ಲಿ ಈ ಹಿಂದೆ ನಡೆದ ಬಹುತೇಕ ದಾಳಿಗಳ ಹೊಣೆಯನ್ನು ಪ್ರತ್ಯೇಕತಾವಾದಿ ಗುಂಪು `ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ವಹಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News