ಶೇಖ್ ಹಸೀನಾ ಪಾಸ್‍ಪೋರ್ಟ್ ರದ್ದುಗೊಳಿಸಿದ ಬಾಂಗ್ಲಾ ಸರಕಾರ

Update: 2025-01-08 16:31 GMT

ಶೇಖ್ ಹಸೀನಾ (Photo:PTI)

ಢಾಕ : ಬಲವಂತದ ನಾಪತ್ತೆಗಳು ಹಾಗೂ ಜುಲೈಯಲ್ಲಿ ಪ್ರತಿಭಟನೆ ಸಂದರ್ಭ ನಡೆದ ಹತ್ಯೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಇತರ 96 ಮಂದಿಯ ಪಾಸ್‍ಪೋರ್ಟ್ ರದ್ದುಗೊಳಿಸಿರುವುದಾಗಿ ಬಾಂಗ್ಲಾದೇಶದ ಸರಕಾರ ಹೇಳಿದೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ಢಾಕಾದಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗೆ ಮಣಿದು ರಾಜೀನಾಮೆ ಸಲ್ಲಿಸಿದ್ದ ಹಸೀನಾ ದೇಶದಿಂದ ಪಲಾಯನ ಮಾಡಿ ಆಗಸ್ಟ್ 5ರಿಂದ ಭಾರತದಲ್ಲಿ ನೆಲೆಸಿದ್ದಾರೆ. ಅವರನ್ನು ಬಾಂಗ್ಲಾಕ್ಕೆ ಗಡೀಪಾರು ಮಾಡಬೇಕೆಂಬ ಮಧ್ಯಂತರ ಸರಕಾರದ ಕೋರಿಕೆ ಸೂಕ್ತ ವಿವರವನ್ನು ಹೊಂದಿಲ್ಲ ಮತ್ತು ಅಪುರ್ಣವಾಗಿದೆ ಎಂದು ಹೇಳಿ ಭಾರತ ಸರಕಾರ ಕೋರಿಕೆಯನ್ನು ಮಾನ್ಯ ಮಾಡಿಲ್ಲ.  

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News