ಬೈಡನ್ ಗಾಝಾ ಯೋಜನೆಗೆ ಇಸ್ರೇಲ್ ಸಮ್ಮತಿ

Update: 2024-06-02 15:52 GMT

ನೆತನ್ಯಾಹು | PC : PTI

ಟೆಲ್‍ಅವೀವ್ : ಗಾಝಾ ಯುದ್ಧ ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸ್ತಾವಿಸಿದ ಒಪ್ಪಂದದ ಚೌಕಟ್ಟನ್ನು ಇಸ್ರೇಲ್ ಒಪ್ಪಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹಾಯಕರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಆದರೆ ಇದು ಉತ್ತಮ ಒಪ್ಪಂದವಲ್ಲ. ದೋಷಪೂರಿತವಾಗಿದ್ದು ಇನ್ನಷ್ಟು ಕೆಲಸದ ಅಗತ್ಯವಿದೆ ಎಂದು ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.

ಬೈಡನ್ ಮುಂದಿರಿಸಿದ ಪ್ರಸ್ತಾವನೆ ಉತ್ತಮ ಒಪ್ಪಂದ ಆಗಿರದಿದ್ದರೂ ನಾವದನ್ನು ಒಪ್ಪಿಕೊಳ್ಳುತ್ತೇವೆ. ಯಾಕೆಂದರೆ ಎಲ್ಲಾ ಒತ್ತೆಯಾಳುಗಳು ಬಿಡುಗಡೆಗೊಳ್ಳಬೇಕೆಂದು ನಾವು ಆತ್ಮೀಯವಾಗಿ ಬಯಸುತ್ತಿದ್ದೇವೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಹಮಾಸ್‍ನ ನರಹಂತಕ ಭಯೋತ್ಪಾದಕ ಸಂಘಟನೆಯ ಮುಖವನ್ನು ನಾಶಪಡಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಇನ್ನಷ್ಟು ಕೆಲಸದ ಅಗತ್ಯವಿದೆ ಎಂದು ಇಸ್ರೇಲ್ ಪ್ರಧಾನಿಗೆ ವಿದೇಶಿ ನೀತಿಯ ಮುಖ್ಯ ಸಲಹೆಗಾರ ಓಫಿರ್ ಫಾಲ್ಕ್ ಹೇಳಿದ್ದಾರೆ.

ಮೇ 31ರಂದು ಅಮೆರಿಕ ಅಧ್ಯಕ್ಷ ಬೈಡನ್ ಮೂರು ಹಂತಗಳ ಕದನವಿರಾಮ ಪ್ರಸ್ತಾವವನ್ನು ಮುಂದಿರಿಸಿದ್ದರು. ಮಧ್ಯಸ್ಥಿಕೆದಾರರ ಮೂಲಕ ಅಂತಿಮಗೊಳಿಸಲಾದ ಒಪ್ಪಂದವು ಒತ್ತೆಯಾಳುಗಳ ಬಿಡುಗಡೆ ಹಾಗೂ ಗಾಝಾದಲ್ಲಿ ಹಮಾಸ್ ಅಧಿಕಾರದಲ್ಲಿ ಇರದ ಉತ್ತಮ ಆಡಳಿತ ವ್ಯವಸ್ಥೆಯ ಅಂಶಗಳನ್ನು ಹೊಂದಿದೆ ಎಂದು ಬೈಡನ್ ಪ್ರತಿಪಾದಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News