ವಿಶ್ವ ಶೌಚಾಲಯ ದಿನದಂದು ಬ್ರಸ್ಸೆಲ್ಸ್ ನಗರದ ಒಳಚರಂಡಿ ಪ್ರವೇಶಿಸಿದ ಬಿಲ್ ಗೇಟ್ಸ್
ಬ್ರಸ್ಸೆಲ್ಸ್: ನವೆಂಬರ್ 19ರಂದು ವಿಶ್ವ ಶೌಚಾಲಯ ದಿನದಂದು ಅಮೆರಿಕಾದ ಬಿಲಿಯಾಧಿಪತಿ ಬಿಲ್ ಗೇಟ್ಸ್ ಅವರು ಬ್ರಸ್ಸೆಲ್ಸ್‌ನ ಸುವರ್ ಮ್ಯೂಸಿಯಂ (ಒಳಚರಂಡಿ ಮ್ಯೂಸಿಯಂ)ಗೆ ಭೇಟಿ ನೀಡಲು ಒಳಚರಂಡಿಯೊಂದನ್ನು ಪ್ರವೇಶಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತ ವೀಡಿಯೋ ಶೇರ್ ಮಾಡಿದ ಗೇಟ್ಸ್ ತಾವು ಅಲ್ಲಿನ ಒಳಚರಂಡಿಯನ್ನು ಪ್ರವೇಶಿಸಿ ಬ್ರಸ್ಸೆಲ್ಸ್ ಒಳಚರಂಡಿ ವ್ಯವಸ್ಥೆಯ ಗೌಪ್ಯ ಇತಿಹಾಸವನ್ನು ಅನ್ವೇಷಿಸಿದ್ದಾಗಿ ತಿಳಿಸಿದ್ದಾರೆ.
ನಗರದ ಒಳಚರಂಡಿ ವ್ಯವಸ್ಥೆಯ ಕುರಿತಂತೆ ಅವರು ವಿಜ್ಞಾನಿಗಳ ಜೊತೆ ಚರ್ಚೆ ನಡೆಸುವ ವೀಡಿಯೋ ಕೂಡ ಪೋಸ್ಟ್ ಮಾಡಲಾಗಿದೆ.
ನಗರದ ಒಳಚರಂಡಿ ತ್ಯಾಜ್ಯವನ್ನು 200 ಮೈಲಿ ಉದ್ದದ ಒಳಚರಂಡಿ ಜಾಲ ಹಾಗೂ ಸಂಸ್ಕರಣಾ ಘಟಕಗಳು ನಿರ್ವಹಿಸುತ್ತವೆ.
ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಬಿಲ್ ಗೇಟ್ಸ್ ಹಲವಾರು ಪ್ರಚಾರ ತಂತ್ರಗಳನ್ನೂ ಈ ಹಿಂದೆ ಅನುಸರಿಸಿದ್ದರು. 2015ರಲ್ಲಿ ಅವರು ಮಲದ ಅಂಶ ಹೊಂದಿದ್ದ ನೀರನ್ನು ಕುಡಿದಿದ್ದರೆ 2016ರಲ್ಲಿ ಅವರು ಶೌಚಾಲಯ ಗುಂಡಿಯ ವಾಸನೆ ಹೀರುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದರು. 2018ರಲ್ಲಿ ಅವರು ಮಲ ಹೊಂದಿದ್ದ ಒಂದು ಗಾಜಿನ ಬಾಟಲಿಯನ್ನು ಹಿಡಿದುಕೊಂಡು ಬೀಜಿಂಗ್‌ನ ರಿಇನ್ವೆಂಟೆಡ್ ಟಾಯ್ಲೆಟ್ ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದರು.