ಬ್ರಿಟನ್: ಕಟ್ಟಡ ನಿರ್ಮಾಣದ ವೇಳೆ 100 ಅಸ್ಥಿಪಂಜರದ ಅವಶೇಷ ಪತ್ತೆ

Update: 2023-07-09 16:37 GMT

ಲಂಡನ್: ಬ್ರಿಟನ್ ನ ಡಬ್ಲಿನ್ ನಲ್ಲಿ ಹೊಸ ಹೋಟೆಲ್ ಕಟ್ಟಡ ನಿರ್ಮಾಣಕ್ಕೆ ಹೊಂಡ ತೋಡುತ್ತಿದ್ದಾಗ 1000 ಸಾವಿರ ವರ್ಷಗಳಷ್ಟು ಹಳೆಯ ಸಮಾಧಿಸ್ಥಳ ಹಾಗೂ ಸುಮಾರು 100ರಷ್ಟು ಅಸ್ಥಿಪಂಜರ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇದರಲ್ಲಿ ಕನಿಷ್ಟ 2 ಅಸ್ಥಿಪಂಜರಗಳು 11ನೇ ಶತಮಾನದ ಅವಧಿಯದ್ದು. 12ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ಸೈಂಟ್ ಮೇರೀಸ್ ಕ್ರೈಸ್ತ ಆಶ್ರಮವಿತ್ತು. 1600ನೇ ಇಸವಿಗೆ ಸಂಬಂಧಿಸಿದ ಕಟ್ಟಡಗಳ ಅವಶೇಷ, 1700ರಲ್ಲಿ ಡಬ್ಲಿನ್ ಗೆ ವಲಸೆ ಬಂದವರು ಬಳಸುತ್ತಿದ್ದ, `ಡಚ್ ಬಿಲ್ಲೀಸ್' ಎಂದು ಕರೆಯಲಾಗುವ ಲೋಹದ ಪಾತ್ರೆಯೂ ಈ ಸಂದರ್ಭ ಪತ್ತೆಯಾಗಿದೆ.

ಪತ್ತೆಯಾದ ವಸ್ತುಗಳನ್ನು ಹೊಸದಾಗಿ ನಿರ್ಮಾಣಗೊಳ್ಳುವ ಹೋಟೆಲ್ ನಲ್ಲಿ ಅಳವಡಿಸಲಾಗುವುದು. ಅಸ್ಥಿಪಂಜರಗಳನ್ನು ಬ್ರಿಟನ್ ನ `ನ್ಯಾಷನಲ್ ಮಾನ್ಯುಮೆಂಟ್ ಸರ್ವಿಸಸ್' ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News