ರಶ್ಯ ನಾಗರಿಕರ ರಕ್ಷಣೆಗೆ ಬ್ರಿಟನ್ ಆಗ್ರಹ

Update: 2023-06-24 17:55 GMT

 ರಿಷಿ ಸುನಾಕ್

ಲಂಡನ್: ರಶ್ಯದಲ್ಲಿ ವ್ಯಾಗ್ನರ್ ಗುಂಪು ರಶ್ಯ ಸೇನೆ ವಿರುದ್ಧ ತಿರುಗಿ ನಿಂತಿರುವ ಬಳಿಕ ಆ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು ಎರಡೂ ಕಡೆಯವರು(ವ್ಯಾಗ್ನರ್ ಗುಂಪು ಮತ್ತು ರಶ್ಯ ಸೇನೆ) ನಾಗರಿಕರ ರಕ್ಷಣೆಗೆ ಗಮನ ನೀಡಬೇಕೆಂದು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಆಗ್ರಹಿಸಿದ್ದಾರೆ.

ವ್ಯಾಗ್ನರ್ ಗುಂಪು ರಶ್ಯದ ದಕ್ಷಿಣ ಪ್ರದೇಶದ ಮೇಲೆ ನಿಯಂತ್ರಣ ಹೊಂದಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸುನಾಕ್ `ಈಗಿನ ಪರಿಸ್ಥಿತಿಯಲ್ಲಿ ಹೇಳುವುದಾದರೆ, ಎರಡೂ ಕಡೆಯವರೂ ನಾಗರಿಕರ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಮಾಸ್ಕೋದಲ್ಲಿ ನಡೆಯುತ್ತಿರುವ ಬೆಳವಣೆಗೆಯನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ. ಜತೆಗೆ, ನಮ್ಮ ಮಿತ್ರರ ಜತೆಗೂ ನಿಕಟ ಸಂಪರ್ಕದಲ್ಲಿದ್ದೇವೆ' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News