ಬ್ರಿಟನ್: ಶಿಶುಗಳ ಹತ್ಯೆ ಪ್ರಕರಣ; ನರ್ಸ್‍ಗೆ ಜೀವಾವಧಿ ಶಿಕ್ಷೆ
Update: 2023-08-21 17:37 GMT
ಲಂಡನ್: ನವಜಾತ ಶಿಶುಗಳ ಹತ್ಯೆ ಮಾಡಿದ ಪ್ರಕರಣದಲ್ಲಿ ಬ್ರಿಟನ್‍ನ ನರ್ಸ್ ಲೂಸಿ ಲೆಟ್ಬಿಗೆ ವಾಯವ್ಯ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಲೂಸಿ ಲೆಟ್ಬಿ 7 ನವಜಾತ ಶಿಶುಗಳ ಹತ್ಯೆ ಮಾಡಿದ್ದಲ್ಲದೆ, ಇತರ 6 ಶಿಶುಗಳ ಹತ್ಯೆಗೆ ಯೋಜನೆ ರೂಪಿಸಿದ್ದಳು ಎಂದು ಪ್ರಕರಣ ದಾಖಲಾಗಿತ್ತು. ವಿಚಾರಣೆಯಲ್ಲಿ ಲೂಸಿಯ ಅಪರಾಧ ಸಾಬೀತಾಗಿರುವುದರಿಂದ ತನ್ನ ಉಳಿದ ಜೀವಿತಾವಧಿಯನ್ನು ಕಂಬಿಗಳ ಹಿಂದೆ ಕಳೆಯಬೇಕು ಎಂದು ನ್ಯಾಯಾಲಯ ತೀರ್ಪು ನೀಡಿರುವುದಾಗಿ ವರದಿಯಾಗಿದೆ.