ಬ್ರಿಟನ್ ಚುನಾವಣೆ | ಲೇಬರ್ ಪಕ್ಷಕ್ಕೆ ಐತಿಹಾಸಿಕ ಗೆಲುವು ; ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್

Update: 2024-07-05 14:59 GMT

ಕೀರ್‌ ಸ್ಟಾರ್ಮರ್‌ (Photo: PTI)

ಲಂಡನ್ : ಕೀರ್ ಸ್ಟಾರ್ಮರ್ ಅವರು ಬ್ರಿಟನ್‌ನ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ 14 ವರ್ಷಗಳ ಆಳ್ವಿಕೆಯ ಬಳಿಕ ಬ್ರಿಟನ್ ಚುನಾವಣೆಯಲ್ಲಿ ಲೇಬರ್ ಪಕ್ಷವು ಐತಿಹಾಸಿಕ ಗೆಲವು ಸಾಧಿಸಿದೆ.

ಎಡಪಂಥೀಯ ಒಲವಿರುವ ಲೇಬರ್ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಜಯಭೇರಿ ಬಾರಿಸಿತು. ಕೀರ್ ಸ್ಟಾರ್ಮರ್ ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ III ರನ್ನು ಭೇಟಿಯಾದ ಬಳಿಕ ಅವರನ್ನು ಸರಕಾರ ರಚಿಸಲು ಆಹ್ವಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News