ಭಾರತದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲು ಪ್ರಜೆಗಳಿಗೆ ಕೆನಡಾ ಸೂಚನೆ

Update: 2024-04-18 16:33 GMT

Photo : freepik

ಟೊರಂಟೊ: ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಆ ದೇಶಕ್ಕೆ ಭೇಟಿ ನೀಡುವಾಗ ಕೆನಡಾ ಪ್ರಜೆಗಳು ಎಚ್ಚರಿಕೆ ವಹಿಸುವಂತೆ ಕೆನಡಾ ಸರಕಾರ ತನ್ನ ಪ್ರಜೆಗಳಿಗೆ ಮಾರ್ಗಸೂಚಿ ಸಲಹೆಯನ್ನು ಜಾರಿಗೊಳಿಸಿದೆ.

ಚುನಾವಣಾ ಪ್ರಚಾರ ಸಭೆ, ರ್ಯಾಲಿಗಳು ನಡೆಯುವುದರಿಂದ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಬಹುದು. ಯಾವುದೇ ಮುನ್ಸೂಚನೆ ನೀಡದೆ ಕಫ್ರ್ಯೂ ಜಾರಿಗೊಳಿಸಬಹುದು. ಸಾರ್ವತ್ರಿಕ ಚುನಾವಣೆ ಎಪ್ರಿಲ್ 19ರಿಂದ ಜೂನ್ 1ರವರೆಗೆ ನಿಗದಿಯಾಗಿದೆ. ಚುನಾವಣೆಗೂ ಮುನ್ನ, ಚುನಾವಣೆಯ ಸಂದರ್ಭದಲ್ಲಿ ಅಥವಾ ಚುನಾವಣೆಯ ಬಳಿಕ ಪ್ರತಿಭಟನೆ, ಪ್ರದರ್ಶನ ನಡೆಯಬಹುದು. ಆದ್ದರಿಂದ ಈ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಪ್ರಜೆಗಳು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಬೃಹತ್ ಸಭೆ ನಡೆಯುವ ಪ್ರದೇಶದಿಂದ ಅಥವಾ ರ್ಯಾಲಿ ನಡೆಯುವ ಪ್ರದೇಶದಿಂದ ಕೆನಡಿಯನ್ನರು ದೂರ ಇರಬೇಕು ಎಂದು ಸಲಹೆ ನೀಡಲಾಗಿದೆ.

ಬೆಂಗಳೂರು, ಚಂಡೀಗಢ ಮತ್ತು ಮುಂಬೈ ನಗರಗಳಲ್ಲಿ ಕಾನ್ಸುಲರ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಈ ನಗರಗಳಿಗೆ ಭೇಟಿ ನೀಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂದು ಸಲಹೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News