ತನಿಖೆ ಆರಂಭಗೊಳ್ಳುವ ಮೊದಲೇ ಕೆನಡಾ ನಮ್ಮನ್ನು ಅಪರಾಧಿಯೆಂದು ಘೋಷಿಸಿದೆ: ಭಾರತ

Update: 2023-11-25 17:10 GMT

Photo: Canva

ಒಟ್ಟಾವ: ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದ ತನಿಖೆ ಆರಂಭಗೊಳ್ಳುವ ಮೊದಲೇ ಭಾರತವನ್ನು ಅಪರಾಧಿಯೆಂದು ಘೋಷಿಸಲಾಗಿದೆ. ಇದು ನಿಮ್ಮ ಆಡಳಿತದ ಸಿದ್ಧಾಂತವೇ ? ಎಂದು ಕೆನಡಾ ಸರಕಾರವನ್ನು ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮ ಪ್ರಶ್ನಿಸಿದ್ದಾರೆ.

ಕೆನಡಾದ ಸರ್ರೆಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ನಿಜ್ಜಾರ್ ಹತ್ಯೆಯಾಗಿದ್ದು ಇದರಲ್ಲಿ ಭಾರತದ ಪಾತ್ರ್ರವಿದೆ ಎಂದು ಕೆನಡಾ ಆರೋಪಿಸಿದೆ.

ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವರ್ಮ ` ತನಿಖೆ ಆರಂಭಗೊಳ್ಳುವ ಮುನ್ನವೇ ಭಾರತವನ್ನು ಅಪರಾಧಿಯೆಂದು ಘೋಷಿಸಲಾಗಿದೆ. ತನಿಖೆಯಲ್ಲಿ ಸಹಕರಿಸಲು ಭಾರತವನ್ನು ಕೇಳಲಾಯಿತು. ನಿಜವಾದ ಕ್ರಿಮಿನಲ್ ಪರಿಭಾಷೆಯನ್ನು ನೋಡಿದರೆ- ಯಾರನ್ನಾದರೂ ಸಹಕರಿಸಲು ಕೇಳಿದಾಗ ಈಗಾಗಲೇ ಆತ ಅಪರಾಧಿಯೆಂದು ನಿರ್ಣಯಿಸಲಾಗಿದೆ, ಈಗ ತನಿಖೆಯಲ್ಲಿ ಸಹಕರಿಸದೆ ಆತನಿಗೆ ಬೇರೆ ದಾರಿಯಿಲ್ಲ ಎಂದಾಗುತ್ತದೆ' ಎಂದು ವರ್ಮ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News