ಕೆನಡಾ | ಎರಡು ದೇವಸ್ಥಾನಗಳಲ್ಲಿ ಭಾರತೀಯ ಕಾನ್ಸುಲರ್ ಶಿಬಿರ ರದ್ದು
Update: 2024-11-12 15:37 GMT
ಟೊರಂಟೊ : ಕೆನಡಾದ ಗ್ರೇಟರ್ ಟೊರಂಟೊ ಪ್ರದೇಶದಲ್ಲಿರುವ ಎರಡು ಹಿಂದು ದೇವಸ್ಥಾನಗಳು ಈ ವಾರಾಂತ್ಯ ನಿಗದಿಯಾಗಿದ್ದ ಕಾನ್ಸುಲರ್ ಶಿಬಿರಗಳನ್ನು ಭದ್ರತೆಯ ಕಾರಣದಿಂದ ರದ್ದುಗೊಳಿಸಿವೆ.
ಟೊರಂಟೋದ ಕಾಲಿ ಬಾರಿ ಮಂದಿರದಲ್ಲಿ ನವೆಂಬರ್ 16 ಮತ್ತು ಬ್ರಾಂಪ್ಟನ್‍ನ ತ್ರಿವೇಣಿ ಮಂದಿರದಲ್ಲಿ ನವೆಂಬರ್ 17ರಂದು ನಿಗದಿಯಾಗಿದ್ದ ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲಾಗಿದೆ. ನಿಗದಿತ ದಿನದಂದು ಹಿಂಸಾತ್ಮಕ ಪ್ರತಿಭಟನೆಯ ಅತ್ಯಂತ ಹೆಚ್ಚಿನ ಬೆದರಿಕೆ ಇರುವುದಾಗಿ ಪ್ರಾದೇಶಿಕ ಪೊಲೀಸರು ಮಾಹಿತಿ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಕಾನ್ಸುಲರ್ ಶಿಬಿರದ ಸಂದರ್ಭ ಪ್ರತಿಭಟನೆ ನಡೆಸುವುದಾಗಿ ಖಾಲಿಸ್ತಾನ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ ಬೆದರಿಕೆ ಒಡ್ಡಿದೆ.