ಕೆನಡಾದ ಬೃಹತ್ ಚಿನ್ನದ ಕಳ್ಳತನ ಪ್ರಕರಣ | ಶರಣಾಗಲಿರುವ ವಿಮಾನಯಾನ ಸಂಸ್ಥೆಯ ಭಾರತ ಮೂಲದ ಮಾಜಿ ವ್ಯವಸ್ಥಾಪಕ

Update: 2024-06-15 14:27 GMT

PC: indianexpress.com

ಒಟ್ಟಾವ : 22.5 ದಶಲಕ್ಷ ಕೆನಡಾ ಡಾಲರ್ ಮೌಲ್ಯದ ಬೃಹತ್ ಚಿನ್ನ ಮತ್ತು ನಗದು ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತ ಮೂಲದ ಏರ್ ಕೆನಡಾದ ಮಾಜಿ ವ್ಯವಸ್ಥಾಪಕ ಮುಂದಿನ ಕೆಲವು ವಾರಗಳಲ್ಲಿ ಶರಣಾಗಲು ಬಯಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ ಎಂದು ಶನಿವಾರ ವರದಿಯಾಗಿದೆ.

ಕಳೆದ ವರ್ಷ ಟೊರೊಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಬಹುಕೋಟಿ ಚಿನ್ನದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಮ್ರನ್ ಪ್ರೀತ್ ಪನೇಸರ್, ಕೆನಡಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಹೊಂದಿದ್ದಾರೆ ಎಂದು ಅವರ ವಕೀಲರಾದ ಗ್ರೇಗ್ ಲ್ಯಾಫೋನ್ಟೈನ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ ಎಂದು ಕೆನಡಿಯನ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ನ್ಯೂಸ್ ವರದಿ ಮಾಡಿದೆ.

“ವಿಚಾರಣೆ ಮುಗಿದ ನಂತರ, ಅವರು ಏನಾದರೂ ತಪ್ಪೆಸಗಿದ್ದರೆ, ಅದಕ್ಕೆ ಅವರಿಗೆ ತಕ್ಕ ಶಿಕ್ಷೆಯಾಗಲಿದೆ” ಎಂದು ಅವರು ಹೇಳಿದ್ದಾರೆ ಎಂದು ಅವರನ್ನು ಉಲ್ಲೇಖಿಸಿ ವರದಿಯಾಗಿದೆ.

ಕೆನಡಾ ಪೊಲೀಸರ ಪ್ರಕಾರ, ಎಪ್ರಿಲ್ 17, 2023ರಂದು ಸುರಕ್ಷಿತ ಸಂಗ್ರಹಾಗಾರ ಸೌಕರ್ಯದಲ್ಲಿ ಸಂಗ್ರಹಿಸಿಡಲಾಗಿದ್ದ 22 ದಶಲಕ್ಷ ಕೆನಡಾ ಡಾಲರ್ ಮೌಲ್ಯದ ಚಿನ್ನದ ಗಟ್ಟಿಗಳು ಹಾಗೂ ವಿದೇಶಿ ನಗದನ್ನು ನಕಲಿ ದಾಖಲೆಗಳನ್ನು ಬಳಸಿ ಕಳ್ಳತನ ಮಾಡಲಾಗಿತ್ತು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News