ಕೆನಡಾ ಸೇನೆಯ ವೆಬ್‍ಸೈಟ್ ಹ್ಯಾಕ್: ‘ಇಂಡಿಯನ್ ಹ್ಯಾಕರ್ಸ್’ ಗುಂಪಿನ ಕೃತ್ಯ; ವರದಿ

Update: 2023-09-28 17:54 GMT

ಸಾಂದರ್ಭಿಕ ಚಿತ್ರ

ಒಟ್ಟಾವ: ಕೆನಡಾ ಸಶಸ್ತ್ರ ಪಡೆಗಳ ಅಧಿಕೃತ ವೆಬ್‍ಸೈಟ್ ಬುಧವಾರ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದ್ದು `ಇಂಡಿಯನ್ ಸೈಬರ್ ಫೋರ್ಸ್' ಎಂಬ ಹ್ಯಾಕರ್‍ಗಳ ಗುಂಪು ಸೈಬರ್‍ದಾಳಿಯ ಹೊಣೆ ವಹಿಸಿಕೊಂಡಿದೆ ಎಂದು `ದಿ ಟೆಲಿಗ್ರಾಫ್' ವರದಿ ಮಾಡಿದೆ.

ಬುಧವಾರ ಮಧ್ಯಾಹ್ನದ ವೇಳೆಗೆ ಸಮಸ್ಯೆ ಕಾಣಿಸಿಕೊಂಡಿದೆ ಹಾಗೂ ಕೆಲಗಂಟೆಗಳ ಬಳಿಕ ಸರಿಪಡಿಸಲಾಗಿದೆ. ಪೀಡಿತ ವೆಬ್‍ಸೈಟ್ ಕೆನಡಾ ಸರಕಾರ ಹಾಗೂ ರಾಷ್ಟ್ರೀಯ ಭದ್ರತಾ ಇಲಾಖೆಯ ವೆಬ್‍ಸೈಟ್‍ಗಳಿಂದ, ಆಂತರಿಕ ನೆಟ್‍ವರ್ಕ್‍ಗಳಿಂದ ಪ್ರತ್ಯೇಕವಾಗಿದೆ ಎಂದು `ರಾಷ್ಟ್ರೀಯ ಭದ್ರತಾ ಇಲಾಖೆ'ಯ ಮಾಧ್ಯಮ ವ್ಯವಹಾರ ಮುಖ್ಯಸ್ಥ ಡೇನಿಯಲ್ ಬೌಥ್ಲಿಯರ್ ಹೇಳಿದ್ದಾರೆ.

ಕೆನಡಾ ಸರಕಾರ ಭಾರತದ ವಿರುದ್ಧ ಮಾಡಿರುವ ಆರೋಪ ಹಾಗೂ ಭಾರತ-ವಿರೋಧಿ ರಾಜಕೀಯ ನಡೆಸುತ್ತಿರುವುದನ್ನು ಖಂಡಿಸುವುದಾಗಿ ಸೆಪ್ಟಂಬರ್ 21ರಂದು ಎಚ್ಚರಿಕೆ ನೀಡಿದ್ದ `ಇಂಡಿಯನ್ ಸೈಬರ್ ಫೋರ್ಸ್', ತಾನು ನಡೆಸುವ ಸೈಬರ್‍ದಾಳಿಗಳ ಶಕ್ತಿಯನ್ನು ಅನುಭವಿಸಲು ಸಿದ್ಧವಾಗಿರುವಂತೆ ಬೆದರಿಕೆ ಒಡ್ಡಿತ್ತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News