ಕಾಂಗೋ ಗಣರಾಜ್ಯದಲ್ಲಿ ದಂಗೆಗೆ ವಿಫಲ ಯತ್ನ : ವರದಿ

Update: 2024-05-19 16:39 GMT

ಸಾಂದರ್ಭಿಕ ಚಿತ್ರ | PC : NDTV

ಕಿನಾಶ: ಕಾಂಗೋ ಗಣರಾಜ್ಯದಲ್ಲಿ ರವಿವಾರ ಬೆಳಿಗ್ಗೆ ನಡೆದ ದಂಗೆ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಕಾಂಗೋದ ಸೇನಾಪಡೆ ಹೇಳಿದೆ.

ರಾಜಧಾನಿಯಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ಸಶಸ್ತ್ರಧಾರಿ ವ್ಯಕ್ತಿಗಳು(ವಿದೇಶೀಯರೂ ಸೇರಿದ್ದರು) ಮತ್ತು ರಾಜಕೀಯ ಮುಖಂಡರ ಭದ್ರತಾ ಪಡೆಯ ನಡುವೆ ಗುಂಡಿನ ದಾಳಿ ನಡೆದಿದ್ದು ಮೂವರು ಸಾವನ್ನಪ್ಪಿದ್ದಾರೆ. ಇದು ದಂಗೆಗೆ ನಡೆದ ವಿಫಲ ಪ್ರಯತ್ನವಾಗಿದೆ ಎಂದು ಸೇನಾಪಡೆ ಹೇಳಿದೆ.

ಅಧ್ಯಕ್ಷರ ಭವನದ ಸಮೀಪವಿರುವ ಸಂಸದ ವಿಟಾಲ್ ಕಮೆರ್ಹೆ ಅವರ ಮನೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬಂದಿ ಹಾಗೂ ಓರ್ವ ದಾಳಿಕೋರ ಸಾವನ್ನಪ್ಪಿದ್ದಾನೆ ಎಂದು ಸರಕಾರದ ವಕ್ತಾರರು ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News