ಕಾಂಗೋ | ಸಂಗೀತ ಕಚೇರಿಯಲ್ಲಿ ಕಾಲ್ತುಳಿತ; 7 ಮಂದಿ ಸಾವು

Update: 2024-07-28 16:25 GMT

PC : outlookindia.com

ಕಿನ್ಷಾಸ : ಕಾಂಗೋ ಗಣರಾಜ್ಯದ ರಾಜಧಾನಿ ಕಿನ್ಷಾಸದಲ್ಲಿ ಶನಿವಾರ ಸಂಗೀತ ಕಚೇರಿಯಲ್ಲಿ ಉಂಟಾದ ಕಾಲ್ತುಳಿತದಿಂದ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

80,000 ಪ್ರೇಕ್ಷಕರಿಗೆ ಸ್ಥಳಾವಕಾಶವಿರುವ ಸ್ಟೇಡ್ಡೆಸ್ ಮಾರ್ಟಿಯಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದೆ. ಗಾಯಗೊಂಡವರಲ್ಲಿ ಕೆಲವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಕಿನ್ಷಾಸಾ ಗವರ್ನರ್ ಡೇನಿಯಲ್ ಬುಂಬಾ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಗದ್ದಲ ಎಬ್ಬಿಸುತ್ತಿದ್ದ ಗುಂಪನ್ನು ನಿಯಂತ್ರಿಸಲು ಭದ್ರತಾ ಸಿಬಂದಿ ಮುಂದಾದಾಗ ಆರಂಭಗೊಂಡ ಮಾತಿನ ಚಕಮಕಿ ಘರ್ಷಣೆಗೆ ತಿರುಗಿದೆ. ಆಗ ಪ್ರೇಕ್ಷಕರು ಗಾಭರಿಗೊಂಡು ಹೊರಗೆ ಓಡುತ್ತಿದ್ದಾಗ ಕಾಲ್ತುಳಿತ ಸಂಭವಿಸಿದೆ. ಆಗ ಕ್ರೀಡಾಂಗಣದಲ್ಲಿ ಸುಮಾರು 30,000 ಜನರಿದ್ದರು ಎಂದು ಸರಕಾರಿ ಸ್ವಾಮ್ಯದ ಆರ್ಟಿಎನ್ಸಿ ಟಿವಿ ವಾಹಿನಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News