ಗಾಝಾದಿಂದ 1,80,000 ಫೆಲೆಸ್ತೀನೀಯರ ಸ್ಥಳಾಂತರ: ವಿಶ್ವಸಂಸ್ಥೆ ವರದಿ
ಖಾನ್ ಯೂನಿಸ್ : ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಭೀಕರ ಕಾಳಗದಿಂದಾಗಿ 1,80,000ಕ್ಕೂ ಅಧಿಕ ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.
ಖಾನ್ ಯೂನಿಸ್ ಪ್ರದೇಶದಲ್ಲಿ ಇತ್ತೀಚಿಗೆ ತೀವ್ರಗೊಂಡ ಆಕ್ರಮಣ, 9 ತಿಂಗಳಿಂದಲೂ ಮುಂದುವರಿದಿರುವ ಇಸ್ರೇಲ್-ಹಮಾಸ್ ಯುದ್ಧವು ಗಾಝಾದ್ಯಂತ ಆಂತರಿಕ ಸ್ಥಳಾಂತರದ ಹೊಸ ಅಲೆಗಳಿಗೆ ಉತ್ತೇಜನ ನೀಡಿದೆ. ಸೋಮವಾರದಿಂದ ಗುರುವಾರದವರೆಗಿನ ಅವಧಿಯಲ್ಲಿ ಕೇಂದ್ರ ಮತ್ತು ಪೂರ್ವ ಖಾನ್ಯೂ ನಿಸ್ ಪ್ರದೇಶದಿಂದ ಸುಮಾರು 1,82,000 ಜನರು ಸ್ಥಳಾಂತರಗೊಂಡಿದ್ದು ಸಾವಿರಾರು ಜನರು ಪೂರ್ವ ಖಾನ್ಯೂಿನಿಸ್ನಕಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ' ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಒಸಿಎಚ್ಎಲ ವರದಿ ಮಾಡಿದೆ.
ಈ ಮಧ್ಯೆ, ಈ ಹಿಂದೆ ಸುರಕ್ಷಿತ ಮಾನವೀಯ ಪ್ರದೇಶವೆಂದು ತಾನೇ ಗುರುತಿಸಿದ್ದ ಪ್ರದೇಶದಲ್ಲಿನ ನಿವಾಸಿಗಳನ್ನೂ ಇಸ್ರೇಲ್ ಪಡೆ ಬಲವಂತದಿಂದ ತೆರವುಗೊಳಿಸುತ್ತಿದೆ ಎಂದು ವರದಿಯಾಗಿದೆ. ಗಾಝಾ ನಗರದಲ್ಲಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 100 ಭಯೋತ್ಪಾದಕರನ್ನು ನಾಶಗೊಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಖಾನ್ಯೂಚನಿಸ್ ನಗರದ ಪೂರ್ವ ಪ್ರಾಂತದ ಸುತ್ತಮುತ್ತ ಶುಕ್ರವಾರದಿಂದ ಭಾರೀ ಯುದ್ಧ ನಡೆಯುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.