ಅಮೆರಿಕ ಅಧ್ಯಕ್ಷೀಯ ಚುನಾವಣೆ| ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಭಾರೀ ಪೈಪೋಟಿ
ಅಮೆರಿಕ: ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 230 ಮತಗಳ ಮೂಲಕ ಮುನ್ನಡೆಯನ್ನು ಸಾಧಿಸಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ 210 ಮತಗಳನ್ನು ಪಡೆದುಕೊಂಡಿದ್ದಾರೆ. ಗೆಲುವಿಗೆ 270 ಮತಗಳ ಅವಶ್ಯಕತೆ ಇದೆ.
ಟ್ರಂಪ್ ಉತ್ತರ ಕೆರೊಲಿನಾ, ಮೊಂಟಾನಾ, ಉತಾಹ್ ನಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಯೊಮಿಂಗ್ (3), ವೆಸ್ಟ್ ವರ್ಜೀನಿಯಾ (4), ಉತಾಹ್ (6), ಟೆಕ್ಸಾಸ್ (40), ಟೆನೆಸ್ಸೀ (11), ದಕ್ಷಿಣ ಕರೋಲಿನಾ( 16), ಒಕ್ಲಾಹೊಮಾ (7), ಒಹಿಯೊ (17), ನೆಬ್ರಸ್ಕಾ (3), ಉತ್ತರ ಡಕೋಟ (3), ಮೊಂಟಾನ (4), ಮಿಸ್ಸಿಸ್ಸಿಪ್ಪಿ (6), ಮಿಸ್ಸೌರಿ (10), ಲೂಸಿಯಾನಾ (8), ಕೆಂಟುಕಿ (8), ಕಾನ್ಸಾಸ್ (6), ಇಂಡಿಯಾನಾ (11), ಲೋವಾ (6), ಫ್ಲೋರಿಡಾ (30), ಅರ್ಕಾನ್ಸಸ್ (6), ಅಲಬಾಮ (9) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಕಮಲಾ ಹ್ಯಾರಿಸ್ ವಾಷಿಂಗ್ ಟನ್, ಕ್ಯಾಲಿಫೋರ್ನಿಯಾದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಕೊಲೊರಾಡೊ(10), ಕನೆಕ್ಟಿಕಟ್ (7), ವಾಷಿಂಗ್ಟನ್ (3), ಡೆಲವೇರ್ (3), ಇಲಿನಿಯೊಸ್ (19), ಮಸ್ಸಾಚುಸೆಟ್ಸ್ (11), ಮೇರಿಲ್ಯಾಂಡ್ (10), ನ್ಯೂಜೆರ್ಸಿ (14), ನ್ಯೂಯಾರ್ಕ್ (28), ರೋಡ್ ಐಸ್ಲ್ಯಾಂಡ್ (4), ವೆರ್ಮಾಂಟ್ (3) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಮತ ಎಣಿಕೆ ಪ್ರಗತಿಯಲ್ಲಿದ್ದು, ಆರಂಭಿಕವಾಗಿ ಡೊನಾಲ್ಡ್ ಟ್ರಂಪ್ ಮುನ್ನಡೆ ಪಡೆದುಕೊಂಡಿದ್ದಾರೆ. ಆದರೆ ಮುನ್ನಡೆ ಅಂತರವು ಕಡಿಮೆಯಾಗಿದ್ದು, ಯಾವ ಕ್ಷಣದಲ್ಲಾದರೂ ಫಲಿತಾಂಶದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಅರಿಝೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ನಾರ್ತ್ ಕರೋಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಿನ್ಸನ್ ರಾಜ್ಯಗಳ ಫಲಿತಾಂಶ ಅಮೆರಿಕದ 47ನೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.