ಮಾದಕವಸ್ತು ಕಳ್ಳಸಾಗಣೆ: 3 ಭಾರತೀಯರ ಸಹಿತ 5 ಮಂದಿಯ ಬಂಧನ

Update: 2024-01-31 16:42 GMT

Photo:ANI

ಟೊರಂಟೊ : ಕೆನಡಾ ಮತ್ತು ಅಮೆರಿಕದ ಜಾರಿ ನಿರ್ದೇಶನಾಲಯ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಬೇಧಿಸಲಾಗಿದ್ದು ಮೂವರು ಭಾರತೀಯ ಕೆನಡಿಯನ್ನರ ಸಹಿತ 5 ಮಂದಿಯನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ಹೇಳಿವೆ.

`ಡೆಡ್ ಹ್ಯಾಂಡ್' ಎಂಬ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್‍ಬಿಐ) ಮತ್ತು ಕೆನಡಾ ಪೊಲೀಸ್ ಇಲಾಖೆಯ ಜಂಟಿ ಪಡೆಗಳ ವಿಶೇಷ ಜಾರಿ ಘಟಕದ ಅಧಿಕಾರಿಗಳು ಪಾಲ್ಗೊಂಡಿದ್ದರು. `ಜಂಟಿ ಕಾರ್ಯಾಚರಣೆಯಲ್ಲಿ ಮೆಕ್ಸಿಕೋ, ಅಮೆರಿಕ ಮತ್ತು ಕೆನಡಾದ ನಡುವೆ ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಐವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು ಅವರನ್ನು ಕಾನೂನು ಪ್ರಕ್ರಿಯೆಗಾಗಿ ಅಮೆರಿಕಕ್ಕೆ ಹಸ್ತಾಂತರಿಸಲಾಗುವುದು. ಶಂಕಿತ ಆರೋಪಿಗಳಲ್ಲಿ ಆಯುಷ್ ಶರ್ಮ, ಗುರ್ಮಿತ್ ಸಿಂಗ್ ಹಾಗೂ ಶುಭಮ್ ಕುಮಾರ್ ಭಾರತೀಯ ಮೂಲದ ಕೆನಡಾ ನಿವಾಸಿಗಳಾಗಿದ್ದಾರೆ ' ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News