ವಿಶ್ವದ ಅತ್ಯಂತ ಶ್ರೀಮಂತ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್; ಅಗ್ರ ಸ್ಥಾನಕ್ಕೇರಿದ ಜೆಫ್ ಬೆಝೋಸ್
Update: 2024-03-05 06:38 GMT
ಕ್ಯಾಲಿಫೋರ್ನಿಯಾ: ಕಳೆದ ಒಂಬತ್ತು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ವಿಶ್ವದ ಅತ್ಯಂತ ಶ್ರೀಮಂತ ಪಟ್ಟದಿಂದ ಎಲಾನ್ ಮಸ್ಕ್ ಕೆಳಗಿಳಿದಿದ್ದಾರೆ.
ಸೋಮವಾರ ಟೆಸ್ಲಾದ ಶೇರು ಮೌಲ್ಯವು ಶೇ. 7.2ರಷ್ಟು ನಷ್ಟ ಅನುಭವಿಸಿದ ನಂತರ ಬ್ಲೂಮ್ ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದಲ್ಲಿ ಎಲಾನ್ ಮಸ್ಕ್ ತಮ್ಮ ಅಗ್ರ ಶ್ರೇಯಾಂಕವನ್ನು ಜೆಫ್ ಬೆಝೋಸ್ ಗೆ ಬಿಟ್ಟುಕೊಟ್ಟಿದ್ದಾರೆ. ಸದ್ಯ, ಮಸ್ಕ್ 197.7 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದರೆ, ಬೆಝೋಸ್ 200.3 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.
2021ರಿಂದೀಚೆಗೆ ಇದೇ ಪ್ರಥಮ ಬಾರಿಗೆ ಅಮೆಝಾನ್ ಇಂಕ್ ಸಂಸ್ಥಾಪಕ ಜೆಫ್ ಬೆಝೋಸ್ ಬ್ಲೂಮ್ ಬರ್ಗ್ ಶ್ರೇಯಾಂಕದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಪಟ್ಟಕ್ಕೇರಿದ್ದಾರೆ.