ಇತಿಹಾಸದಲ್ಲೇ ಪ್ರಥಮ ಬಾರಿಗೆ ನ್ಯೂಯಾರ್ಕ್ ನಗರದ ಶಾಲೆಗೆ ದೀಪಾವಳಿ ರಜೆ

Update: 2024-10-30 21:19 IST
ಇತಿಹಾಸದಲ್ಲೇ ಪ್ರಥಮ ಬಾರಿಗೆ ನ್ಯೂಯಾರ್ಕ್ ನಗರದ ಶಾಲೆಗೆ ದೀಪಾವಳಿ ರಜೆ

Screengrab : ANI

  • whatsapp icon

ನ್ಯೂಯಾರ್ಕ್ : ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ನವೆಂಬರ್ 1ರಂದು ಶಾಲೆಗಳಿಗೆ ರಜೆ ಘೋಷಿಸಿರುವುದಾಗಿ ಮೇಯರ್ ಕಚೇರಿ ಘೋಷಿಸಿದೆ.

ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ನಗರದ ಬದ್ಧತೆಯನ್ನು ಗುರುತಿಸುವ ಕ್ರಮವಾಗಿ ನ್ಯೂಯಾರ್ಕ್ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೀಪಾವಳಿ ಹಬ್ಬದ ಕಾರಣ ನವೆಂಬರ್ 1ರಂದು ಶಾಲೆಗಳಿಗೆ ರಜೆ ಸಾರಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಬೆಳಕಿನ ಹಬ್ಬವಾದ ದೀಪಾವಳಿ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಅಮೆರಿಕದ ಅತೀ ಎತ್ತರದ ಕಟ್ಟಡವಾದ `ವರ್ಲ್ಡ್‌ ಟ್ರೇಡ್ ಸೆಂಟರ್' ಅನ್ನು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲಾಗಿದೆ. ವರ್ಲ್ಡ್‌ ಟ್ರೇಡ್ ಸೆಂಟರ್ ಅನ್ನು ಕಿತ್ತಳೆ, ಹಳದಿ ಮತ್ತು ನೀಲಿ ದೀಪಗಳಿಂದ ಅಲಂಕರಿಸಿರುವ ವೀಡಿಯೊವನ್ನು ಎಎನ್‍ಐ ಸುದ್ದಿಸಂಸ್ಥೆ ಪ್ರಸಾರ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News