ಬಿಡುಗಡೆ ವೇಳೆ ಹಮಾಸ್ ಹೋರಾಟಗಾರನ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳು : ವೀಡಿಯೊ ವೈರಲ್

Update: 2025-02-22 22:09 IST
ಬಿಡುಗಡೆ ವೇಳೆ ಹಮಾಸ್ ಹೋರಾಟಗಾರನ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳು : ವೀಡಿಯೊ ವೈರಲ್

Photo | X

  • whatsapp icon

ಜೆರುಸಲೇಂ : ಕದನ ವಿರಾಮ ಒಪ್ಪಂದದ ಮುಂದುವರಿದ ಭಾಗವಾಗಿ ಹಮಾಸ್ ಇಸ್ರೇಲ್‌ನ ಮೂವರು ಒತ್ತೆಯಾಳುಗಳನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿದೆ. ಈ ವೇಳೆ ಇಸ್ರೇಲಿನ ಒತ್ತೆಯಾಳು ಓರ್ವರು ಹಮಾಸ್ ಹೋರಾಟಗಾರನ ಹಣೆಗೆ ಮುತ್ತಿಡುವ ವೀಡಿಯೊ ವೈರಲ್ ಆಗಿದೆ,

ಓಮರ್ ವೆಂಕರ್ಟ್, ಓಮರ್ ಶೆಮ್ ಟೋವ್ ಮತ್ತು ಎಲಿಯಾ ಕೊಹೆನ್ ಎಂಬ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿದೆ. ಈ ವೇಳೆ ಅವರಿಗೆ ಬಿಡುಗಡೆ ಪ್ರಮಾಣ ಪತ್ರವನ್ನು ಕೂಡ ನೀಡಲಾಗಿದೆ.

ಓಮರ್ ಶೆಮ್ ಟೋವ್ ಎಂಬ ಒತ್ತೆಯಾಳು ಬಿಡುಗಡೆಯ ವೇಳೆ ಹಮಾಸ್‌ನ ಇಬ್ಬರು ಹೋರಾಟಗಾರರಿಗೆ ಮುತ್ತಿಡುವುದು ವೀಡಿಯೊದಲ್ಲಿ ಸೆರೆಯಾಗಿದೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಟೈಮ್ಸ್ ಆಫ್ ಇಸ್ರೇಲ್ ಜೊತೆ ಮಾತನಾಡಿದ ಓಮರ್ ತಂದೆ ಮಾಲ್ಕಿ ಶೆಮ್ ಟೋವ್, ಬಿಡುಗಡೆಯ ವೇಳೆ ನನ್ನ ಮಗನ ಸಂತೋಷದ ವರ್ತನೆಯು ಅವನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಓಮರ್ ತೆಳ್ಳಗಿದ್ದಾನೆ. ಆದರೆ, ಆತ ಅತ್ಯಂತ ಧನಾತ್ಮಕ ಮಸ್ಥಿತಿಯನ್ನು ಹೊಂದಿರುವವನಾಗಿದ್ದಾನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News