ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತ್ಯು

Update: 2024-10-08 16:42 GMT

ಸಾಂದರ್ಭಿಕ ಚಿತ್ರ (PTI)

ಗಾಝಾ : ಗಾಝಾದ ಅಲ್-ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಮಂಗಳವಾರ ಹೇಳಿದೆ.

ಅಲ್-ಬುರೇಜ್ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿರುವ ಅಬ್ದುಲ್ ಹದಿ ಕುಟುಂಬದ ಮೂರು ಅಂತಸ್ತಿನ ಮನೆಯನ್ನು ಗುರಿಯಾಗಿಸಿ ಇಸ್ರೇಲ್ ಯುದ್ಧವಿಮಾನ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಕ್ಕಳ ಸಹಿತ 17 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಏಜೆನ್ಸಿಯ ವಕ್ತಾರರು ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆಯಿಂದ ಗಾಝಾದ ಉತ್ತರ ಭಾಗಗಳಲ್ಲಿ ಇಸ್ರೇಲ್ ಹಲವು ವೈಮಾನಿಕ ದಾಳಿ ನಡೆಸಿದೆ. ಜಬಾಲಿಯಾ ಪ್ರದೇಶದಲ್ಲಿ ತನ್ನ ಪಡೆ ಆರಂಭಿಸಿರುವ ಭೂ ಕಾರ್ಯಾಚರಣೆ ಮುಂದುವರಿದಿದೆ. ಕೆಲ ದಿನಗಳಿಂದ ಜಬಾಲಿಯಾದಲ್ಲಿ ಸುಮಾರು 20 ಹಮಾಸ್ ಸದಸ್ಯರು ಹತರಾಗಿದ್ದು ಈ ಪ್ರದೇಶದಲ್ಲಿರುವ ಹಿಜ್ಬುಲ್ಲಾ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯವನ್ನು ನಾಶಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News