ಅಧ್ಯಕ್ಷರ ಪದಚ್ಯುತಿ ನಿರ್ಣಯಕ್ಕೆ ಜಾರ್ಜಿಯಾ ಕೋರ್ಟ್ ಸಹಮತ

Update: 2023-10-17 18:57 GMT

ಟಿಬಿಲಿಸಿ: ಅಧ್ಯಕ್ಷೆ ಸಲೋಮ್ ಝುರಾಬಿಶ್ವಿಲಿ ಅನಧಿಕೃತ ವಿದೇಶಿ ಪ್ರವಾಸಗಳನ್ನು ಮಾಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಸೋಮವಾರ ತೀರ್ಪು ನೀಡಿರುವ ಜಾರ್ಜಿಯಾದ ಸಾಂವಿಧಾನಿಕ ನ್ಯಾಯಾಲಯ, ಅಧ್ಯಕ್ಷೆಯ ಪದಚ್ಯುತಿಯ ದಾರಿಯನ್ನು ಸುಗಮಗೊಳಿಸಿದೆ.

ಅಧ್ಯಕ್ಷೆ ಸಲೋಮ್ ಯುರೋಪಿಯನ್ ಯೂನಿಯನ್ನಿಂದ ದೂರಗೊಂಡು ರಶ್ಯಕ್ಕೆ ಸನಿಹವಾಗುತ್ತಿದ್ದಾರೆ ಎಂಬ ಕಳವಳದ ಹಿನ್ನೆಲೆಯಲ್ಲಿ ಆಡಳಿತಾರೂಢ ಜಾರ್ಜಿಯನ್ ಡ್ರೀಮ್ ಪಾರ್ಟಿ(ಜಿಡಿಪಿ)ಯ ಸಂಸದರು ಸೆಪ್ಟಂಬರ್ ನಲ್ಲಿ ಅಧ್ಯಕ್ಷೆಯನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಮಂಡಿಸಿದ್ದರು. ಅಧ್ಯಕ್ಷೆಯ ದೋಷಾರೋಪಣೆಗೆ ಕನಿಷ್ಟ 100 ಸಂಸದರ ಬೆಂಬಲದ ಅಗತ್ಯವಿದ್ದು ಜಿಡಿಪಿ ಕೇವಲ 84 ಸ್ಥಾನಗಳನ್ನು ಹೊಂದಿರುವುದರಿಂದ ನಿರ್ಣಯವನ್ನು ಸಾಂವಿಧಾನಿಕ ಕೋರ್ಟ್ ಪರಾಮರ್ಶೆಗೆ ಒಪ್ಪಿಸಲಾಗಿತ್ತು.

2018ರಿಂದ ಅಧಿಕಾರದಲ್ಲಿರುವ ಸಲೋಮ್ ಸರಕಾರದ ಅನುಮತಿಯಿಲ್ಲದೆ ಹಲವು ಬಾರಿ ವಿದೇಶ ಪ್ರಯಾಣ ನಡೆಸುವ ಮೂಲಕ ಜಾರ್ಜಿಯಾದ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಜಾರ್ಜಿಯಾ ಸಾಂವಿಧಾನಿಕ ಕೋರ್ಟ್ ನ ಮುಖ್ಯಸ್ಥ ಮೆರಾಬ್ ತುರಾವ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News