ಜಾಗತಿಕ ನಾವೀನ್ಯತೆ ಸೂಚ್ಯಂಕ; ಸ್ವೀಡನ್ ಅಗ್ರ, ಭಾರತಕ್ಕೆ 40ನೇ ಸ್ಥಾನ

Update: 2023-09-29 17:53 GMT

File Photo

ಜಿನೆವಾ: ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(ಡಬ್ಯ್ಲುಐಪಿಒ) ಬಿಡುಗಡೆಗೊಳಿಸಿರುವ 2023ರ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಸತತ 13ನೇ ವರ್ಷ ಸ್ವಿಝರ್ಲ್ಯಾಂಡ್ ಅಗ್ರಸ್ಥಾನ ಕಾಯ್ದುಕೊಂಡರೆ ಭಾರತ 40ನೇ ಸ್ಥಾನದಲ್ಲಿದೆ.

132 ದೇಶಗಳ ಪಟ್ಟಿಯಲ್ಲಿ ಸ್ವಿಝರ್ಲ್ಯಾಂಡ್, ಸ್ವೀಡನ್, ಅಮೆರಿಕ, ಬ್ರಿಟನ್ ಮತ್ತು ಸಿಂಗಾಪುರ ಅಗ್ರ 5 ಸ್ಥಾನ ಪಡೆದಿವೆ. 40ನೇ ಸ್ಥಾನ ಪಡೆದಿರುವ ಭಾರತ ಕಡಿಮೆ-ಮಧ್ಯಮ ಆದಾಯದ 37 ದೇಶಗಳ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. 2015ರಲ್ಲಿ ಭಾರತ 81ನೇ ಸ್ಥಾನದಲ್ಲಿತ್ತು.

132 ಜಾಗತಿಕ ಆರ್ಥಿಕತೆಗಳ ಹೊಸ ಪರಿಕಲ್ಪನೆಯ ಪರಿಸರ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಇತ್ತೀಚಿನ ಜಾಗತಿಕ ನಾವೀನ್ಯತೆ ಪ್ರವೃತ್ತಿಗಳನ್ನು ಆಧರಿಸಿ ಈ ಸೂಚ್ಯಂಕ ರಚಿಸಲಾಗಿದ್ದು ವಿಶ್ವದಾದ್ಯಂತ ಸರಕಾರಗಳಿಗೆ ತಮ್ಮ ದೇಶದಲ್ಲಿನ ನಾವೀನ್ಯತೆ ಆಧಾರಿತ ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ನಿರ್ಣಯಿಸಲು ವಿಶ್ವಾಸಾರ್ಹ ಸಾಧನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News