ಸುಂದರ್ ಪಿಚೈ, ಸತ್ಯ ನಾಡೆಲ್ಲಾಗಿಂತ ಹೆಚ್ಚು ವೇತನ ಪಡೆಯುವ ಭಾರತೀಯ ಮೂಲದ ಸಿಇಓ!

Update: 2024-06-28 02:59 GMT

PC:x.com/fela_news

ವಾಷಿಂಗ್ಟನ್: ವಿಶ್ವದ ಅಗ್ರಗಣ್ಯ ತಂತ್ರಜ್ಞಾನ ಕಂಪನಿಗಳ ಸಾರಥ್ಯ ವಹಿಸಿದ ಮಾತ್ರಕ್ಕೆ ಅವರ ಗಳಿಕೆಯೂ ಗರಿಷ್ಠ ಎಂಬಂತಿಲ್ಲ. ವಿಶ್ವದಲ್ಲಿ ಗರಿಷ್ಠ ವಾಸ್ತವ ವೇತನ ಪಡೆಯುವ 10 ಸಿಇಓಗಳ ಪಟ್ಟಿಯನ್ನು ವರದಿಯೊಂದು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಮೂಲದ ಸಿಇಓಗಳ ಪಟ್ಟಿಯೂ ಇದ್ದು, ಅಗ್ರಸ್ಥಾನದಲ್ಲಿರುವವರು ಮೈಕ್ರೋಸಾಫ್ಟ್ ಮಖ್ಯಸ್ಥ ಸತ್ಯ ನಾಡೆಲ್ಲ ಕೂಡಾ ಅಲ್ಲ ಅಥವಾ ಗೂಗಲ್ ನ ಉನ್ನತಾಧಿಕಾರಿ ಸುಂದರ್ ಪಿಚೈ ಅವರಂತೂ ಅಲ್ಲ.

ಪಾಲೊ ಆಲ್ಟೋ ನೆಟ್ ವರ್ಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲೇಶ್ ಅರೋರ ಮಾತ್ರ ಅಮೆರಿಕದಲ್ಲಿ ಗರಿಷ್ಠ ವೇತನ ಪಡೆಯುವ ಅಗ್ರಗಣ್ಯ 10 ಸಿಇಓಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದವರು ಎಂದು ಸಿ-ಸೂಟ್ ಕಾಂಪ್ ವರದಿ ಹೇಳಿದೆ.

ಪಟ್ಟಿಯಲ್ಲಿ 2023ರಲ್ಲಿ ಬಹಿರಂಗಪಡಿಸಲಾದ ಒಟ್ಟು ವೇತನ ಮತ್ತು ವಾಸ್ತವವಾಗಿ ಪಾವತಿಸಿದ ವೇತನ ಹೀಗೆ ಎರಡು ಮ್ಯಾಟ್ರಿಕ್ಸ್ ಗಳನ್ನು ತೋರಿಸಲಾಗಿದೆ. 2023ರಲ್ಲಿ ಅರೋರಾ ಅವರ ಬಹಿರಂಗಪಡಿಸಿದ ವೇತನ 151.4 ದಶಲಕ್ಷ ಡಾಲರ್. ಇವರಿಗೆ ವಾಸ್ತವವಾಗಿ ಪಾವತಿಸಿದ ವೇತನ 266.4 ದಶಲಕ್ಷ ಡಾಲರ್ ಆಗಿದ್ದು, ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

ದೆಹಲಿಯ ಏರ್ಫೋರ್ಸ್ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿಯಾಗಿರುವ ಅರೋರಾ, ಗೂಗಲ್ ನ ಮುಖ್ಯ ವಹಿವಾಟು ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. 2014ರಲ್ಲಿ ಗೂಗಲ್ ತೊರೆದ ಅವರು ಜಪಾನ್ ನ ಸಾಫ್ಟ್ಬ್ಯಾಂಕ್ ಮುಖ್ಯಸ್ಥರಾಗಿದ್ದರು. 2018ರ ಬಳಿಕ ಪಾಲೊ ಆಲ್ಟೊ ನೆಟ್ವರ್ಕ್ಸ್ ಎಂಬ ಸೈಬರ್ ಸೆಕ್ಯುರಿಟಿ ಕಂಪನಿಯ ಮುಖ್ಯಸ್ಥರಾಗಿದ್ದಾರೆ.

1.4 ಶತಕೋಟಿ ಡಾಲರ್ ವೇತನ ಪಡೆಯುತ್ತಿರುವ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 1.1 ಶತೋಟಿ ಡಾಲರ್ ವೇತನ ಪಡೆಯುವ ಪಲಂಟೀರ್ ಟೆಕ್ನಾಲಜೀಸ್ ನ ಅಲೆಕ್ಸಾಂಡರ್ ಕಾರ್ಪ್ ಎರಡನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News