ಟಿಕ್‍ಟಾಕ್ ನಿಷೇಧ ಮಸೂದೆಗೆ ಅಮೆರಿಕ ಸಂಸತ್ ಸದನದ ಅನುಮೋದನೆ

Update: 2024-03-13 16:54 GMT

ಸಾಂದರ್ಭಿಕ ಚಿತ್ರ | Photo : NDTV

ವಾಷಿಂಗ್ಟನ್: ಟಿಕ್‍ಟಾಕ್ (ವೀಡಿಯೊ ಶೇರಿಂಗ್ ಆ್ಯಪ್) ನಿಷೇಧಿಸುವ ಮಸೂದೆಗೆ ಅಮೆರಿಕ ಸಂಸತ್‍ನ ಕೆಳಮನೆ `ಹೌಸ್ ಆಫ್ ರೆಪ್ರಸೆಂಟೇಟಿವ್ಸ್' ಅನುಮೋದನೆ ನೀಡಿದೆ. ಈ ಮಸೂದೆಯನ್ನು ಸದನ 352-65 ಮತಗಳಿಂದ ಅನುಮೋದಿಸಿದೆ.

ಟಿಕ್‍ಟಾಕ್ ತನ್ನ ಚೀನಾ ಮಾಲಕರಿಂದ ದೂರ ಇರಬೇಕು ಅಥವಾ ಅಮೆರಿಕದಲ್ಲಿ ನಿಷೇಧಕ್ಕೆ ಒಳಗಾಗಬೇಕು' ಎಂಬ ಅಂಶವನ್ನು ಮಸೂದೆ ಹೊಂದಿದೆ. ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಮುಂದುವರಿಸಬೇಕಿದ್ದರೆ ಟಿಕ್‍ಟಾಕ್ ತನ್ನ ಆಸ್ತಿಗಳನ್ನು ಅಮೆರಿಕದ ಸಂಸ್ಥೆಯೊಂದಕ್ಕೆ ಮಾರಬೇಕು. ಅಮೆರಿಕದ ಈ ಕ್ರಮವನ್ನು ಖಂಡಿಸಿರುವ ಚೀನಾ, ಇದು ಅಮೆರಿಕಕ್ಕೆ ತಿರುಗು ಬಾಣವಾಗಲಿದೆ ಎಂದಿದೆ.

ಆದರೆ ಮುಂದಿನ ಹಂತದಲ್ಲಿ ಸೆನೆಟ್‍ನ ಅನುಮೋದನೆ ಪಡೆಯುವ ಬಗ್ಗೆ ಅನುಮಾನವಿದೆ. ಸುಮಾರು 170 ದಶಲಕ್ಷ ಅಮೆರಿಕನ್ನರು ಬಳಸುತ್ತಿರುವ ಟಿಕ್‍ಟಾಕ್ ನಿಷೇಧವನ್ನು ಸೆನೆಟ್‍ನ ಹಲವು ಸದಸ್ಯರು ವಿರೋಧಿಸುತ್ತಿದ್ದಾರೆ. ` ವಿದೇಶಿ ಪ್ರತಿಸ್ಪರ್ಧಿಗಳು ನಿಯಂತ್ರಿಸುವ ಅಪ್ಲಿಕೇಶನ್‍ಗಳ ಕಾಯ್ದೆಯಿಂದ ಅಮೆರಿಕನ್ನರನ್ನು ರಕ್ಷಿಸುವುದು' ಎಂಬ ಹೆಸರಿನ ಮಸೂದೆ ಸೆನೆಟ್‍ನ ಅನುಮೋದನೆ ಪಡೆದರೆ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಲಿದ್ದಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News